Wednesday, June 24, 2026
Homeತಾಜಾ ಸುದ್ದಿಕೇಂದ್ರದಿಂದ ‌ರಾಜ್ಯಕ್ಕೆ 8633 ಕೋಟಿ‌ ಜಿಎಸ್ ಟಿ ಪರಿಹಾರ ಮಂಜೂರು

ಕೇಂದ್ರದಿಂದ ‌ರಾಜ್ಯಕ್ಕೆ 8633 ಕೋಟಿ‌ ಜಿಎಸ್ ಟಿ ಪರಿಹಾರ ಮಂಜೂರು

- Advertisement -
- Advertisement -

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ 2022 ರ ಮೇ 31 ರವರೆಗಿನ 8633 ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಮಂಜೂರು ಮಾಡಿದೆ.

ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸುಭಿಕ್ಷ ಆರ್ಥಿಕತೆಯತ್ತ ಇದೊಂದು ಮಹತ್ವದ ಹೆಜ್ಜೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರವು ನಿನ್ನೆ ಒಟ್ಟು ಇಪ್ಪತ್ತೊಂದು
ರಾಜ್ಯಗಳಿಗೆ 86912 ಕೋಟಿ ರೂ ಜಿಎಸ್ ಟಿ ಪರಿಹಾರ ನೀಡಿದೆ.

ಈ ಮೂಲಕ‌ ರಾಜ್ಯಗಳಿಗೆ ಬಾಕಿ ಇದ್ದ ಪರಿಹಾರದ ಮೊತ್ತವನ್ನು ಕೇಂದ್ರ ‌ಸರ್ಕಾರ ಪೂರ್ತಿ‌ ಪಾವತಿಸಿದಂತಾಗಿದ್ದು, ಜೂನ್ ತಿಂಗಳ ಮೊತ್ತವಷ್ಟೇ ಉಳಿದುಕೊಂಡಿದೆ.‌

- Advertisement -

Latest News

error: Content is protected !!