Saturday, May 18, 2024
Homeಉದ್ಯಮ'ಸಿಮೆಂಟ್​ ಕಾರ್ಪೋರೇಷನ್‌​ ಆಫ್‌ ಇಂಡಿಯಾ ಲಿಮಿಟೆಡ್​'ನಲ್ಲಿ 46 ಹುದ್ದೆಗಳಿಗೆ ಅರ್ಜಿ ಆಹ್ವಾನ

‘ಸಿಮೆಂಟ್​ ಕಾರ್ಪೋರೇಷನ್‌​ ಆಫ್‌ ಇಂಡಿಯಾ ಲಿಮಿಟೆಡ್​’ನಲ್ಲಿ 46 ಹುದ್ದೆಗಳಿಗೆ ಅರ್ಜಿ ಆಹ್ವಾನ

spot_img
- Advertisement -
- Advertisement -

ಸಿಮೆಂಟ್​ ಕಾರ್ಪೋರೇಷನ್‌​ ಆಫ್‌ ಇಂಡಿಯಾ ಲಿಮಿಟೆಡ್​ (ಸಿಸಿಐ) ಸಾರ್ವಜನಿಕ ವಲಯವಾಗಿದ್ದು, ಸಿಮೆಂಟ್​ನ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ನೋಡಿಕೊಳ್ಳುತ್ತದೆ. ಪ್ರಸ್ತುತ ಸಂಸ್ಥೆಯಲ್ಲಿ ಖಾಲಿ ಇರುವ ಇಂಜಿನಿಯರ್​ ಹಾಗೂ ಅಧಿಕಾರಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.

ಹುದ್ದೆ ವಿವರ
ಇಂಜಿನಿಯರ್​- ( ಪ್ರೊಡಕ್ಷನ್​ -8, ಮೆಕ್ಯಾನಿಕಲ್​ -6, ಸಿವಿಲ್​- 3, ಮೈನಿಂಗ್- 4, ಇನ್​ಸ್ಟ್ರುಮೆಂಟೇಷನ್​ -4, ಎಲೆಕ್ಟ್ರಿಕಲ್​-4) = 29
ಆಫೀಸರ್ ಪೋಸ್ಟ್- (ಮೆಟಿರಿಯಲ್​ ಮ್ಯಾನೇಜ್​ಮೆಂಟ್​&3, ಮಾರ್ಕೇಟಿಂಗ್​-2, ಫೈನಾನ್ಸ್​ ಆಯಂಡ್​ ಅಕೌಂಟ್ಸ್​-4, ಹ್ಯೂಮನ್​ ರಿಸೋರ್ಸ್​- 2, ಕಂಪನಿ ಸೆಕ್ರೇಟರಿ-1, ರಾಜ್​ಭಾಷಾ ಅಧಿಕಾರಿ -1, ಲೀಗಲ್​ -4) = 17
ಒಟ್ಟು ಹುದ್ದೆಗಳು: 46

ಇಂಜಿನಿಯರ್ ಹುದ್ದೆಗೆ ವಿದ್ಯಾರ್ಹತೆ: ಕೆಮಿಕಲ್​, ಮೆಕ್ಯಾನಿಕಲ್​, ಸಿವಿಲ್​, ಮೈನಿಂಗ್​, ಎಲೆಕ್ಟ್ರಾನಿಕ್ಸ್​ ಆಯಂಡ್​ ಇನ್​ಸ್ಟ್ರುಮೆಂಟೇಷನ್​, ಎಲೆಕ್ಟ್ರಿಕಲ್​ ಇಂಜಿನಿಯರಿಂಗ್​ ಪದವಿ,

ಆಫೀಸರ್ ಪೋಸ್ಟ್ ಗೆ ವಿದ್ಯಾರ್ಹತೆ: ಮೆಟಿರಿಯಲ್​ ಮ್ಯಾನೇಜ್​ಮೆಂಟ್​, ಎಚ್​ಆರ್​/ ಪಸೋರ್ನಲ್​ ಮ್ಯಾನೇಜ್​ಮೆಂಟ್​/ ಲೇಬರ್​ ವೆಲ್ಫೇರ್​ನಲ್ಲಿ ಪದವಿ/ ಸ್ನಾತಕೋತ್ತರ ಪದವಿ/ ಡಿಪ್ಲೊಮಾ, ಮಾರ್ಕೆಟಿಂಗ್​ನಲ್ಲಿ ಎಂಬಿಎ, ಸಿಎ/ ಐಸಿಡಬ್ಲುಎ, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಕಾನೂನು ಪದವಿ ಮಾಡಿದ್ದು, ಕನಿಷ್ಠ 2 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಕಂಪ್ಯೂಟರ್​ ಜ್ಞಾನ ಅವಶ್ಯ.

ಸಿಸಿಐನಲ್ಲಿರುವ ಹುದ್ದೆಗಳು 1 ವರ್ಷದ ತಾತ್ಕಾಲಿಕ ಒಪ್ಪಂದಕ್ಕೆ ಒಳಪಟ್ಟಿವೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ನಂತರ ಅವಧಿಯನ್ನು 3 ವರ್ಷಗಳವರೆಗೆ ವಿಸ್ತರಿಸಲಾಗುವುದು. ಪ್ರಸ್ತುತ ತಂದೂರ್​, ಬೋಕಜನ್​, ರಾಜ್​ಬನ್​ ಟಕ ಹಾಗೂ ಕಾಪೋರ್ರೇಟ್​ ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೈದ್ಯಕಿಯವಾಗಿ ಫಿಟ್​ ಆಗಿರಬೇಕು.

ವಯೋಮಿತಿ: 30.6.2021ಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳಿಗೂ ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಮೀಸಲಾತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 21 ಸ್ಥಾನ, ಇತರ ಹಿಂದುಳಿದ ಅಭ್ಯರ್ಥಿಗಳಿಗೆ 12, ಎಸ್ಸಿಗೆ 6, ಎಸ್ಟಿಗೆ 3, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 4 ಸ್ಥಾನ ಮೀಸಲಿರಿಸಲಾಗಿದೆ.

ವೇತನ: ಮಾಸಿಕ 25,000 ರೂ. ವೇತನ ಜತೆ ಮನೆ ಬಾಡಿಗೆ ಭತ್ಯೆಯಾಗಿ 5,000 ರೂ. ನೀಡಲಾಗುವುದು. ವೈದ್ಯಕಿಯ ಸೌಲಭ್ಯ, ಪಿಎ​, ಟಿಎ, ಹೆರಿಗೆ ರಜೆಗಳನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನಕ್ಕೆ ಹಾಜರಾಗುವಾಗ ಅಭ್ಯರ್ಥಿಗಳು ಮೂಲ ದಾಖಲೆಗಳನ್ನು ತೆಗೆದುಕೊಂಡು ಬರಲು ಸೂಚಿಸಲಾಗಿದೆ. ಅಜಿರ್ಯಲ್ಲಿ ನೀಡಿದ ವಿಳಾಸದಿಂದ ಸಂದರ್ಶನ ಸ್ಥಳಕ್ಕೆ ಬರಲು ಸ್ಲೀಪರ್​ ರೈಲ್ವೆ ಪ್ರಯಾಣ ದರವನ್ನು ನೀಡಲಾಗುವುದು.

ಅರ್ಜಿ ಸಲ್ಲಿಸಲು ಕೊನೇ ದಿನ: 30.6.2021
ಅಧಿಸೂಚನೆಗೆ: https://bit.ly/3wULy0c
ಮಾಹಿತಿಗೆ: www.cciltd.in

- Advertisement -
spot_img

Latest News

error: Content is protected !!