Wednesday, May 15, 2024
Homeಕರಾವಳಿಉಡುಪಿಕಾರ್ಕಳ: ಸಾರ್ವಜನಿಕರು ಕುಡಿಯುವ ನೀರಿನ ಬಾವಿಯಲ್ಲಿ ಸಿಮೆಂಟ್ ಚೀಲ ಮತ್ತು ಇತರ ತ್ಯಾಜ್ಯ ವಸ್ತುಗಳು: ಪುರಸಭಾ...

ಕಾರ್ಕಳ: ಸಾರ್ವಜನಿಕರು ಕುಡಿಯುವ ನೀರಿನ ಬಾವಿಯಲ್ಲಿ ಸಿಮೆಂಟ್ ಚೀಲ ಮತ್ತು ಇತರ ತ್ಯಾಜ್ಯ ವಸ್ತುಗಳು: ಪುರಸಭಾ ಸದಸ್ಯ ಶುಭದರಾವ್ ಆಕ್ರೋಶ

spot_img
- Advertisement -
- Advertisement -

ಕಾರ್ಕಳ: ಪುರಸಭಾ ಆಡಳಿತದ ನಿರ್ಲಕ್ಷಕ್ಕೆ ಪುರಸಭಾ ಸದಸ್ಯ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇನೆಂದರೆ ಸಾರ್ವಜನಿಕರು ಕುಡಿಯುವ ನೀರಿನ ಬಾವಿಯಲ್ಲಿ ಸಿಮೆಂಟ್ ಚೀಲ ಮತ್ತು ಇತರ ತ್ಯಾಜ್ಯ ವಸ್ತುಗಳು ಬಿದ್ದಿವೆ.

ಕಾರ್ಕಳ ಪುರಸಭಾ ವ್ಯಾಪ್ತಿಯ ಆನೆಕೆರೆ ಪಾರ್ಕ್ ಪಕ್ಕದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯಲ್ಲಿ ಸಿಮೆಂಟ್ ಚೀಲ ಹಾಗೂ, ತ್ಯಾಜ್ಯ ವಸ್ತುಗಳು ಬಿದ್ದು ನೀರು ಅಶುದ್ಧವಾಗಿದೆ ಇದಕ್ಕೆ ಪುರಸಭೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಪುರಸಭಾ ಸದಸ್ಯ ಆಕ್ರೋಶ ಹೊರಹಾಕಿದ್ದಾರೆ.

“ನಾನು ಆ ಭಾಗದ ಸದಸ್ಯರಾಗಿದ್ದ ಸಂದರ್ಭದಲ್ಲಿ ಆನೆಕೆರೆ , ನಾರಾಯಣಗುರು ನಗರ , ಬೈಪಾಸ್ , ದುಗ್ಗಬೆಟ್ಟು ಇಲ್ಲಿನ ಜನರ ನೀರಿನ ಸಮಸ್ಯೆಯನ್ನು ಅರಿತು ತೆರೆದ ಬಾವಿಯನ್ನು ನಿರ್ಮಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಿತ್ತು.

ಸಾರ್ವಜನಿಕರು ಕುಡಿಯಲು ಮತ್ತು ತಮ್ಮ ಮನೆಯ ದಿನ ನಿತ್ಯ ಬಳಕೆಗೆ ಇದೇ ನೀರನ್ನು ಉಪಯೋಗಿಸುತ್ತಿದ್ದಾರೆ, ನೀರಿನ ಶುದ್ಧತೆ ಕಾಪಾಡಲು ಅನುಕೂಲವಾಗುವಂತೆ ಬಾವಿಗೆ ಕಬ್ಬಿಣದ ಗ್ರಿಲ್ ಅಳವಡಿಸುವಂತೆ ಪ್ರತಿ ಸಾಮಾನ್ಯ ಸಭೆಯಲ್ಲಿ ವಿನಂತಿಸಿದರೂ ಆಡಳಿತ ನಿರ್ಲಕ್ಷಿಸುತ್ತಾ ಬಂದಿದೆ. ಇದರ ಫಲ ಇಂದು ಅಶುದ್ಧ ನೀರು ಕುಡಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!