Wednesday, May 15, 2024
Homeಕರಾವಳಿಆಲಂಕಾರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ಕಾರು ಡಿಕ್ಕಿ !

ಆಲಂಕಾರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಅಪರಿಚಿತ ಕಾರು ಡಿಕ್ಕಿ !

spot_img
- Advertisement -
- Advertisement -

ಆಲಂಕಾರು : ಅಪರಿಚಿತ ಕಾರೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರಿಗೆ ಗುದ್ದಿದ ಪರಿಣಾಮ ವ್ಯಕ್ತಿ ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಆಲಂಕಾರು ಪೇಟೆಯಲ್ಲಿ ನಡೆದಿದೆ.

ಪೆರಾಬೆ ಗ್ರಾಮದ ಕಡಿರಡ್ಕದ ಪೊಡಿಯ ಎಂಬವರು ಗಾಯಗೊಂಡ ವ್ಯಕ್ತಿ . ಕೆಲಸದ ನಿಮಿತ್ತ ಆಲಂಕಾರು ಪೇಟೆಗೆ ಬಂದಿದ್ದ ಇವರು ರಸ್ತೆ ದಾಟುವಾಗ ಅಪರಿಚಿತ ಕಾರೊಂದು ಇವರಿಗೆ ಗುದ್ದಿದೆ.

ಸ್ಥಳೀಯರು ಕೂಡಲೇ ಹತ್ತಿರದ ಕ್ಲಿನಿಕ್ ಒಂದಕ್ಕೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಕಾರು ಚಾಲಕನೂ ಕ್ಲಿನಿಕ್ ನತ್ತ ಬಂದು ಬಳಿಕ ಕಾರು ಚಲಾಯಿಸಿಕೊಂಡು ಪರಾರಿಯಾಗಿರುವುದಾಗಿ ಗಾಯಗೊಂಡ ವ್ಯಕ್ತಿ ದೂರಿದ್ದಾರೆ.

ಇವರಿಗೆ ಕಾರು ಗುದ್ದಿದ ಪರಿಣಾಮ ರಸ್ತೆಗೆ ಬಿದ್ದು ತಲೆ , ಕಾಲು ಹಾಗೂ ಸೊಂಟಕ್ಕೆ ಸಣ್ಣ ಪುಟ್ಟ ಗಾಯವಾಗಿದೆ ಹೆಚ್ಚಿನ ತಪಾಸಣೆಗಾಗಿ ಕಡಬ ಆಸ್ಪತ್ರೆಗೆ ಬಂದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಕಾರು ಚಾಲಕ ಯಾವ ಕಡೆ ಹೋಗಿದ್ದಾನೆ ಎಂಬುದು ಸಿಸಿಟಿವಿ ಪರಿಶೀಲಿಸಿದರೆ ತಿಳಿಯಬಹುದು ಎಂದು ಸ್ಥಳೀಯರು ಅಭಿಪ್ರಾಯ ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ

- Advertisement -
spot_img

Latest News

error: Content is protected !!