Sunday, June 7, 2026
HomeUncategorizedಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ!!

ಬೆಳ್ಳಂಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ!!

- Advertisement -
- Advertisement -

ಬೆಂಗಳೂರು, ಜು. 10: ಬೆಳ್ಳಂಬೆಳಗ್ಗೆ ಬೆಂಗಳೂರು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಿಢೀರ್ ದಾಳಿ ನಡೆಸಿದ್ದು , ಮಾರಕಾಸ್ತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಜೈಲಿನಿಂದಲೇ ಕೊಲೆಗಳಿಗೆ ಸಂಚು ಹೂಡಿರೋ ಹಿನ್ನೆಲೆಯಲ್ಲಿ ಶನಿವಾರ ನಸುಕಿನ ಜಾವ 5 ಗಂಟೆಗೆ ಶ್ವಾನದಳದ ಜೊತೆಗೆ ದಾಳಿ ನಡೆಸಿದ ಪೊಲೀಸರು, ಜೈಲಿನ ಪ್ರತಿಯೊಂದು ಸ್ಥಳವನ್ನು ಕಟ್ಟುನಿಟ್ಟಾಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಜೈಲಿನಲ್ಲಿ ಗಾಂಜಾ, ಸಿಗರೇಟು, ಮೊಬೈಲ್‌ ಫೋನ್ಗಳು, 10 ಸಾವಿರ ನಗದು, ಪೆನ್ ಡ್ರೈವ್ ಸೇರಿದಂತೆ ಹಲವು ಬಗ್ಗೆ ಹರಿತವಾದ ಚಾಕುಗಳು ಪತ್ತೆಯಾಗಿವೆ.

ಮತ್ತೊಂದೆಡೆ ಮುಂಜಾವಿನಲ್ಲಿ ರೌಡಿ ಶೀಟರ್ಸ್‌ಗೆ ಶಾಕ್ ಕೊಟ್ಟಿರುವ ಬೆಂಗಳೂರು ಪೊಲೀಸರು ರೌಡಿ ಆಸಾಮಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ 8 ವಿಭಾಗದ ಪೊಲೀಸರಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ, ನಗರಾದ್ಯಂತ 1 ಸಾವಿರಕ್ಕೂ ಅಧಿಕ ರೌಡಿಶೀಟರ್ಸ್ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ.

- Advertisement -

Latest News

error: Content is protected !!