- Advertisement -


- Advertisement -
ಮೂಡುಬಿದಿರೆ: ಆಗಸ್ಟ್ 19 ರ ರಾತ್ರಿ ಕಲ್ಲಮುಂಡ್ಕೂರಿನ ಬಲರಾಮ್ ಎಂಬುವವರಿಗೆ ಸೇರಿದ ಎರಡು ಜಾನುವಾರುಗಳನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದು, ಇದೀಗ ಕದ್ದ ಜಾನುವಾರುಗಳನ್ನು ಪೊಲೀಸರು ವಶಪಡಿಸಿಕೊಂಡು ಅವುಗಳ ಮಾಲೀಕರಿಗೆ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮೂಡಬಿದರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃತ್ತ ನಿರೀಕ್ಷಕ ಸಂದೇಶ್ ಪಿಜಿ ತನಿಖೆ ಕೈಗೆತ್ತಿಕೊಂಡಿದ್ದರು.
ಪೊಲೀಸರಿಗೆ ಕದ್ದ ದನಗಳು ಅಡ್ಡೂರಿನಲ್ಲಿವೆ ಎಂಬ ಮಾಹಿತಿ ಲಭ್ಯವಾಗಿದ್ದು, ನಂತರದಲ್ಲಿ ಸ್ಥಳಕ್ಕೆ ಧಾವಿಸಿ ಅವುಗಳನ್ನು ಪರಿಶೀಲಿಸಿದಾಗ ಅವು ಕದ್ದ ಜಾನುವಾರುಗಳು ಎಂದು ದೃಢಪಟ್ಟಿತು ಎನ್ನಲಾಗಿದೆ. ಇನ್ನು ದನ ಕಳ್ಳರು ಅವುಗಳನ್ನು ಅಡ್ಡೂರಿನಲ್ಲಿರುವ ವ್ಯಾಪಾರಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ.
- Advertisement -


