Tuesday, July 2, 2024
Homeಕರಾವಳಿಜಾನುವಾರುಗಳಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಸಾಗಾಟ, CCTV ಯಲ್ಲಿ ಸೆರೆಯಾಯ್ತು ದೃಶ್ಯ

ಜಾನುವಾರುಗಳಿಗೆ ಮತ್ತು ಬರುವ ಇಂಜೆಕ್ಷನ್ ನೀಡಿ ಸಾಗಾಟ, CCTV ಯಲ್ಲಿ ಸೆರೆಯಾಯ್ತು ದೃಶ್ಯ

spot_img
- Advertisement -
- Advertisement -

ಅರಂತೋಡು: ದ‌.ಕ. ಸಂಪಾಜೆ ಗ್ರಾಮದ ಗಡಿಕಲ್ಲಿನಲ್ಲಿ ಜೂ.7ರಂದು ರಾತ್ರಿಯ ವೇಳೆಯಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ದನಗಳಿಗೆ ಅಮಲು ಇಂಜೆಕ್ಷನ್ ನೀಡಿದ ಕಿಡಿಗೇಡಿಗಳು ಸ್ಕಾರ್ಫಿಯೋ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಿದ್ದು, ಈ ದೃಶ್ಯ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಘಟನೆಯ ವಿವರ: ಜೂ.7ರಂದು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಸುಳ್ಯ ಭಾಗದಿಂದ ಕಪ್ಪು ಬಣ್ಣದ ಸ್ಕಾರ್ಫಿಯೋ ಕಾರಿನಲ್ಲಿ ಬಂದ ಕಿಡಿಗೇಡಿಗಳು ಗಡಿಕಲ್ಲು ಮಸೀದಿಯ ಪಕ್ಕದಲ್ಲಿದ್ದ ಹತ್ತು ಹಲವು ದನಗಳ ಪೈಕಿ ಎರಡು ದನಗಳಿಗೆ ಅಮಲು ಬರುವ ಇಂಜೆಕ್ಷನ್ ಕೊಟ್ಟು ಬಳಿಕ ತಮ್ಮ ಸ್ಕಾರ್ಫಿಯೋ ವಾಹನದಲ್ಲಿ ತುಂಬಿಸಿಕೊಂಡು ಸುಳ್ಯ ಭಾಗಕ್ಕೆ ತೆರಳಿರುವುದಾಗಿ ತಿಳಿದುಬಂದಿದೆ.

ಗಡಿಕಲ್ಲು ಮಸೀದಿಯ ಬಳಿ ಮುಖ್ಯರಸ್ತೆ ಬದಿಯಲ್ಲಿ ಎರಡು ಲಾರಿಗಳು ನಿಂತಿದ್ದು, ಸ್ಕಾರ್ಫಿಯೋ ವಾಹನದಲ್ಲಿ ಬಂದವರು ತಮ್ಮ ಸ್ಕಾರ್ಫಿಯೋ ವಾಹನವನ್ನು ಎರಡು ಲಾರಿಯ ಮಧ್ಯಭಾಗದಲ್ಲಿ ನಿಲ್ಲಿಸಿ, ದನಗಳನ್ನು ತುಂಬಿಸಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಮಸೀದಿಯ ಬಳಿ ಅನ್ವರ್ ಎಂಬವರ ಮನೆಯಿದ್ದು, ಅವರ ಮನೆಯ ಸಿ.ಸಿ. ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

- Advertisement -
spot_img

Latest News

error: Content is protected !!