Friday, June 5, 2026
Homeಕರಾವಳಿಮಂಗಳೂರುಕಡಬ: ಫೇಸ್ ಬುಕ್ ನಲ್ಲಿ ಜಾತಿ ನಿಂದನೆ ಆರೋಪ; ವ್ಯಕ್ತಿ ವಿರುದ್ಧ ದೂರು ದಾಖಲು

ಕಡಬ: ಫೇಸ್ ಬುಕ್ ನಲ್ಲಿ ಜಾತಿ ನಿಂದನೆ ಆರೋಪ; ವ್ಯಕ್ತಿ ವಿರುದ್ಧ ದೂರು ದಾಖಲು

- Advertisement -
- Advertisement -

ಕಡಬ: ಫೇಸ್ ಬುಕ್ ನಲ್ಲಿ ಜಾತಿ ನಿಂದನೆ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಡಬ ನಿವಾಸಿ ರಾಜು ಹೊಸ್ಮಠ ಎಂಬವರು ಪ್ರವೀಣ್‌ ಮದ್ದಡ್ಕ  ಎಂಬವರ ವಿರುದ್ಧ ದೂರು ದಾಖಸಿದ್ದಾರೆ. ನಾನು ದ.ಕ ಜಿಲ್ಲೆಯ ಅಂಬೇಡ್ಕರ್‌  ಅಪತ್ಬಾಂಧವ ಸಂಘಟನೆಯ ಜಿಲ್ಲಾಧ್ಯಕ್ಷನಾಗಿದ್ದು, ದಿನಾಂಕ: 21.03.2024 ರಂದು ರಾತ್ರಿ, ನನ್ನ ಮೊಬೈಲ್‌ ಗೆ‌ ಬಂದ ಫೇಸ್ಬುಬುಕ್‌ನ ಲಿಂಕ್‌ನ್ನು ಪರಿಶೀಲಿಸಿದಾಗ, ಪ್ರವೀಣ್‌ ಮದ್ದಡ್ಕ  ಎಂಬಾತನು ತನ್ನ ಫೇಸ್‌ಬುಕ್‌ ಖಾತೆಯಲ್ಲಿ, ಜಾತಿ, ಜನಾಂಗ, ಪಂಗಡಗಳ ನಡುವೆ ದ್ವೇಷ ಬಿತ್ತುವ ಹಾಗೂ ಸಮಾಜದ ಸೌಹಾರ್ದತೆಗೆ ಭಂಗವನ್ನುಂಟು ಮಾಡುವಂತಹ ಪೋಸ್ಟ್ ಹಾಕಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

 ಅದರಂತ ಈ ಬಗ್ಗೆ ಸದ್ರಿಯವರು ನೀಡಿದ ದೂರಿನ ಮೇರೆಗೆ ಪುತ್ತೂರು ನಗರ  ಪೊಲೀಸ್ ಠಾಣೆಯಲ್ಲಿ ಅ.ಕ್ರ 27/2024 ಕಲಂ:  153(ಎ), 295(ಎ)  ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!