Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ; ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ವ್ಯಕ್ತಿ; ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ...

ಬಂಟ್ವಾಳ; ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ವ್ಯಕ್ತಿ; ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -
- Advertisement -

ಬಂಟ್ವಾಳ; ಸುಳ್ಳು ದೂರು ನೀಡಿರುವ ಆರೋಪಿಯ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ವ್ಯಕ್ತಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ: 13-06-2025 ರಂದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಉಮ್ಮರ್‌ ಫಾರೂಕ್‌  ಎಂಬವರು ಬಂಟ್ವಾಳದ ದೇರಾಜೆ ಬಳಿ  ಇಬ್ಬರು ಅಪರಿಚಿತರು ಕೊಲೆ ಮಾಡಲು ಯತ್ನಿಸಿರುವ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ  ತನಿಖೆ ನಡೆಸಿದಾಗ  ಇದೊಂದು ಸುಳ್ಳು ದೂರು ಅನ್ನೋದು ಗೊತ್ತಾಗಿ ಪೊಲೀಸರು ದೂರುದಾರ ಉಮ್ಮರ್‌ ಫಾರೂಕ್‌  ವಿರುದ್ಧವೇ  26-08-2025 ರಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಈ ವಿಚಾರವಾಗಿ ದಿನಾಂಕ: 28.08.2025 ರಂದು ಫೇಸ್ಬುಕ್ ನ Ashaf Talapady ಎಂಬ  ಪೇಜ್ ನಲ್ಲಿ   ಕಾನೂನು ಬದ್ಧವಾದ ಆಧಾರಗಳು ಇಲ್ಲವೆಂದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಮಾಡಿದ ಅಶ್ರಪ್ ಎಂಬಾತನಿಗೆ ಪೊಲೀಸರು  ನೋಟಿಸ್ ಜಾರಿ ಮಾಡಿ ಆತನ  ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Latest News

error: Content is protected !!