Thursday, June 25, 2026
Homeಕರಾವಳಿಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣ; ಸ್ಥಳ ಪರಿಶೋಧನೆಯಲ್ಲಿ ಪತ್ತೆಯಾಗದ ಅಸ್ಥಿಪಂಜರದ ಕುರುಹು

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣ; ಸ್ಥಳ ಪರಿಶೋಧನೆಯಲ್ಲಿ ಪತ್ತೆಯಾಗದ ಅಸ್ಥಿಪಂಜರದ ಕುರುಹು

- Advertisement -
- Advertisement -

ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗಸ್ಟ್  8ರಂದು ಎಸ್ ಐಟಿ ಅಧಿಕಾರಿಗಳು ದೂರುದಾರ ತೋರಿಸಿದ ಹೊಸ 4 ಜಾಗಗಳಲ್ಲಿ ಎಸ್ ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸಿದ್ದಾರೆ. ಆದರೆ ಅಲ್ಲೂ ಯಾವುದೇ ಅವಶೇಷ ಪತ್ತೆಯಾಗಿಲ್ಲ.

ಸ್ಪಾಟ್ ನಂಬರ್ 15 ರಲ್ಲಿ ದೂರುದಾರ ತೋರಿಸಿದ 4 ಸ್ಥಳದಲ್ಲಿ  ಕಾರ್ಮಿಕರು ಉತ್ಖನನ ಕಾರ್ಯ ನಡೆಸಿದ್ದಾರೆ. ಆದರೆ 4 ಸ್ಥಳದಲ್ಲೂ ಅಸ್ಥಿಪಂಜರದ ಕುರುಹು ಪತ್ತೆಯಾಗಿಲ್ಲ. 2010 ರಲ್ಲಿ ಶಾಲಾ ಬಾಲಕಿಯ ಮೃತ ದೇಹ ರಹಸ್ಯವಾಗಿ ಹೂತಿಟ್ಟಿರು ಬಗ್ಗೆ ದೂರುದಾರ ಮಾಹಿತಿ ನೀಡಿದ್ದ. ಕಲ್ಲೇರಿ ಸಮೀಪ ಕಾಡಿನಲ್ಲಿ ಶವ ಹೂತಿಟ್ಟ ಬಗ್ಗೆ ದೂರಿನಲ್ಲಿ ಅನಾಮಿಕ ವ್ಯಕ್ತಿ ಉಲ್ಲೇಖಿಸಿದ್ದ. ನಿನ್ನೆ  ದೂರುದಾರ ಕಲ್ಲೇರಿ ನಮೀಪ ತೋರಿಸಿದ್ದ ಜಾಗದಲ್ಲಿ SIT ತಂಡ ಪರಿಶೋಧನೆ ನಡೆಸಿದೆ. ದೂರುದಾರ ತೋರಿಸಿದ ಜಾಗವನ್ನು ಸ್ಪಾಟ್ ನಂಬರ್ 15  ಎಂದು SIT ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ. ಆದರೆ ಸ್ಥಳ ಪರಿಶೋಧನೆ ಸಂದರ್ಭ ಅಸ್ಥಿಪಂಜರ ಕುರುಹು ಪತ್ತೆಯಾಗಿಲ್ಲ.

ಬಳಿಕ ಸ್ಪಾಟ್ ನಂಬರ್ 15 ಅಕ್ಕ ಪಕ್ಕ ಮತ್ತೆ ಮೂರು ಜಾಗ ದೂರುದಾರ ಗುರುತಿಸಿದ್ದಾನೆ. ಆ ಪೈಕಿ ಒಂದು ಸ್ಥಳಕ್ಕೆ ಸ್ಪಾಟ್ ನಂಬರ್ 15 (a) ಎಂದು SIT ಅಧಿಕಾರಿಗಳು ಮಾರ್ಕ್ ಮಾಡಿದ್ದಾರೆ. ಉಳಿದ 2 ಜಾಗಕ್ಕೆ ನಂಬರ್ ನೀಡಿಲ್ಲ. ದೂರುದಾರ ತೋರಿಸಿದ ಎಲ್ಲಾ ಜಾಗದಲ್ಲೂ ಸ್ಥಳ ಅಗೆದು SIT  ಪರಿಶೋಧನೆ ನಡೆಸಿದೆ. ಆದರೆ ಸ್ಥಳ ಪರಿಶೋಧನೆಯಲ್ಲಿ ಕುರುಹು ಪತ್ತೆಯಾಗಿಲ್ಲ.

- Advertisement -

Latest News

error: Content is protected !!