Thursday, June 4, 2026
Homeಕರಾವಳಿಚಾರ್ಮಾಡಿಯಲ್ಲಿ ಬ್ರೇಕ್ ಫೈಲ್ ಆಗಿ ಧರೆಗೆ ಗುದ್ದಿದ್ದ ಕಾರು

ಚಾರ್ಮಾಡಿಯಲ್ಲಿ ಬ್ರೇಕ್ ಫೈಲ್ ಆಗಿ ಧರೆಗೆ ಗುದ್ದಿದ್ದ ಕಾರು

- Advertisement -
- Advertisement -

ಬೆಳ್ತಂಗಡಿ; ಕಾರೊಂದು ಬ್ರೇಕ್ ಫೈಲ್ ಆಗಿ ಧರೆಗೆ ಗುದ್ದಿದ ಘಟನೆ  ಚಾರ್ಮಾಡಿಯ ಕೃಷ್ಣನಗರ ಪಾಂಡಿಕಟ್ಟೆಯಲ್ಲಿ ನಡೆದಿದೆ..
ಸಾಗರ ಕಡೆಯಿಂದ ಕುಟುಂಬವೊಂದು ಕಾರಿನಲ್ಲಿ ಬರುತ್ತಿದ್ದ ಕಾರು ಬ್ರೇಕ್ ಫೈಲ್ ಆಗಿ ಘಾಟಿಯ ಧರೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ವಿನೋದ್ ಸಾಗರ ಎಂಬುವವರು ಗಂಭೀರ ಗಾಯಗೊಂಡಿದ್ದು, ಕಾರಿನಲ್ಲಿದ್ದ ನಾಲ್ಕು ಮಂದಿ ಮಹಿಳೆಯರಿಗೂ ಗಾಯಗಳಾಗಿದೆ.

ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ತಕ್ಷಣ ದಾಖಲಿಸಿದ್ದು, ವಿನೋದ್ ಅವರನ್ನು ಉಜಿರೆಯ ಖಾಸಗಿ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!