Friday, June 5, 2026
Homeಕರಾವಳಿಪುತ್ತೂರಿನ ಕೆಮ್ಮಾಯಿಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು: ಬೆಳ್ತಂಗಡಿ ಬಾರ್ಯ ನಿವಾಸಿ ಅರುಣ್...

ಪುತ್ತೂರಿನ ಕೆಮ್ಮಾಯಿಲ್ಲಿ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು: ಬೆಳ್ತಂಗಡಿ ಬಾರ್ಯ ನಿವಾಸಿ ಅರುಣ್ ಕುಮಾರ್ ಸಾವು

- Advertisement -
- Advertisement -

ಪುತ್ತೂರು: ಬೆಳ್ಳಂಬೆಳಗ್ಗೆ ಕಾರೊಂದು ರಸ್ತೆ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಮೃತಪಟ್ಟ ಘಟನೆ ಪುತ್ತೂರಿನ ಕೆಮ್ಮಾಯಿಯಲ್ಲಿ ನಡೆದಿದೆ. ಬೆಳ್ತಂಗಡಿ ಬಾರ್ಯ ನಿವಾಸಿ ಅರುಣ್ ಕುಮಾರ್ ಮೃತ ದುರ್ದೈವಿ.

ಇನ್ನು ಕಾರು‌ ರಸ್ತೆ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದು ಅವರನ್ನು ಆದರ್ಶ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ದಯಾನಂದ ಅವರ ಸಹಾಯದೊಂದಿಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!