Saturday, June 6, 2026
Homeತಾಜಾ ಸುದ್ದಿಆಗುಂಬೆ ಘಾಟ್: ಕಾರು ಖರೀದಿಸಿ ಮನೆಗೆ ತರುತ್ತಿದ್ದ ವೇಳೆ ಬೆಂಕಿ ಅವಘಡ, ರಸ್ತೆಯಲ್ಲೇ ಹೊತ್ತಿ ಉರಿದ...

ಆಗುಂಬೆ ಘಾಟ್: ಕಾರು ಖರೀದಿಸಿ ಮನೆಗೆ ತರುತ್ತಿದ್ದ ವೇಳೆ ಬೆಂಕಿ ಅವಘಡ, ರಸ್ತೆಯಲ್ಲೇ ಹೊತ್ತಿ ಉರಿದ ಕಾರು

- Advertisement -
- Advertisement -

ತೀರ್ಥಹಳ್ಳಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ಮನೆಗೆ ತೆರಳುತ್ತಿದ್ದ ವೇಳೆ ಕಾರ್ ಗೆ ಬೆಂಕಿ ತಗುಲಿ ಧಗಧಗನೆ ಹೊತ್ತಿ ಉರಿದ ಘಟನೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯ ಒಂದನೇ ತಿರುವಿನಲ್ಲಿ ಸಂಭವಿಸಿದೆ.

ಶಿವಮೊಗ್ಗ ಮೂಲದ ಅರವಿಂದ ಎನ್ನುವವರು ಕಾರ್ಕಳ ದಿಂದ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ತನ್ನ ಗೆಳೆಯರೊಂದಿಗೆ ಮನೆಗೆ ತರುತ್ತಿದ್ದ ವೇಳೆ ಆಗುಂಬೆ ಒಂದನೇ ತಿರುವಿನಲ್ಲಿ ಕಾರಿನಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆ ಬೆಂಕಿ ಇಡೀ ಗಡಿಯನ್ನೇ ಆವರಿಸಿ ಸುಟ್ಟು ಕರಕಲಾಗಿದೆ. ತಕ್ಷಣೆವೇ ಮೂವರು ಕಾರ್ ನಿಂದ ಇಳಿದು ಪಾರಾಗಿದ್ದಾರೆ.

ಇದರಿಂದಾಗಿ ಆಗುಂಬೆ ಘಾಟ್ ನಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಆಗಿತ್ತು. ಆಗುಂಬೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!