Saturday, June 6, 2026
Homeಅಪರಾಧಉಡುಪಿ: ವಿದ್ಯಾರ್ಥಿನಿಯರ ಮುಂದೆ ವಿಕೃತಿಯಾಗಿ ವರ್ತಿಸುತ್ತಿದ್ದ ಬಸ್ ನಿರ್ವಾಹಕನ ಬಂಧನ!

ಉಡುಪಿ: ವಿದ್ಯಾರ್ಥಿನಿಯರ ಮುಂದೆ ವಿಕೃತಿಯಾಗಿ ವರ್ತಿಸುತ್ತಿದ್ದ ಬಸ್ ನಿರ್ವಾಹಕನ ಬಂಧನ!

- Advertisement -
- Advertisement -

ಉಡುಪಿ: ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸಿ ವಿಕೃತವಾಗಿ ವರ್ತಿಸುತ್ತಿದ್ದ ಆರೋಪದಲ್ಲಿ ಖಾಸಗಿ ಬಸ್ ನಿರ್ವಾಹಕನನ್ನು ಉಡುಪಿ ನಗರ ಪೊಲೀಸರು ಗುರುವಾರದಂದು ಬಂಧಿಸಿದ್ದಾರೆ.

ಬಂಧಿತ ಆರೋಪಿ ಉಪೇಂದ್ರ ಯಾನೆ ಉಮಾಶಂಕರ್ ಭಂಡಾರಿ. ಈತ ಕಳೆದ ಹಲವಾರು ದಿನಗಳಿಂದ ಕಾಲೇಜಿನ ವಿದ್ಯಾರ್ಥಿನಿಯರಿಗೆ ತನ್ನ ಗುಪ್ತಾಂಗವನ್ನು ತೋರಿಸಿ ವಿಕೃತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಹೀಗೆ ಆತ ನ.6ರಂದು ರಾತ್ರಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದಿದ್ದನು. ಆದರೆ ಯಾವುದೇ ದೂರು ದಾಖಲಾಗದ ಹಿನ್ನೆಲೆಯಲ್ಲಿ ಪೊಲೀಸರು ಆತನ ವಿರುದ್ಧ ಕ್ರಮ ಜರಗಿಸಿರಲಿಲ್ಲ ಎನ್ನಲಾಗಿದೆ.

ಇದೀಗ ಕಾಲೇಜಿನ ಹಾಸ್ಟೆಲ್‌ನ ಆಡಳಿತಾಧಿಕಾರಿಗಳು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿರುವ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

- Advertisement -

Latest News

error: Content is protected !!