Thursday, June 4, 2026
Homeಕರಾವಳಿಪುತ್ತೂರು ಕಡೆಯಿಂದ ಮದುವೆ ದಿಬ್ಬಣ ಹೊರಟಿದ್ದ ಖಾಸಗಿ ಬಸ್ ಪಲ್ಟಿ: ಮಗು ಸೇರಿ ಐದು ಮಂದಿ...

ಪುತ್ತೂರು ಕಡೆಯಿಂದ ಮದುವೆ ದಿಬ್ಬಣ ಹೊರಟಿದ್ದ ಖಾಸಗಿ ಬಸ್ ಪಲ್ಟಿ: ಮಗು ಸೇರಿ ಐದು ಮಂದಿ ಸಾವು

- Advertisement -
- Advertisement -

ಸುಳ್ಯ: ಪುತ್ತೂರು ಕಡೆಯಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಕೇರಳದ ಪಾನತ್ತೂರು ಬಳಿ ಪಲ್ಟಿಯಾದ ಪರಿಣಾಮ, ಐವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಕೊಡಗಿನ ಕರಿಕೆಯಲ್ಲಿ ಇದ್ದ ಮದುವೆ ಕಾರ್ಯಕ್ರಮಕ್ಕೆಂದು ಕಲ್ಲಪ್ಪಳ್ಳಿ ಪಾನತ್ತೂರು ಮೂಲಕ ಈ ಬಸ್ ಸಾಗುತ್ತಿತ್ತು. ಪಾಣತ್ತೂರು ಬಳಿಯ ಗಡಿಗುಡ್ಡೆ ಪೆರಿಯಾರಂ ಎಂಬಲ್ಲಿ ಮನೆಯೊಂದರ ಮೇಲೆ ಬಸ್ ಬಿದ್ದು ದುರಂತ ಸಂಭವಿಸಿದೆ.

ಬಸ್‌ನಲ್ಲಿ ಸುಮಾರು 60 ಮಂದಿ ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಒಂದು ಮಗು ಸೇರಿದಂತೆ ಐವರು ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿವೆ. ಸುಮಾರು 20 ಮಂದಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಕಾಂಞಂಗಾಡ್ ಆಸ್ಪತ್ರೆಗೆ ಸೇರಿಸಲಾಗಿದೆ.

- Advertisement -

Latest News

error: Content is protected !!