ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಷಡ್ಯಂತ್ರ ರೂಪಿಸಿ ಮಾಸ್ಕ್ ಹಾಕಿಸಿ ಚಿನ್ನಯ್ಯನನ್ನು ಕರೆದುಕೊಂಡು ಬಂದು ಸುಳ್ಳು ದೂರು ಕೊಡಿಸಿ ದೇಶಾದ್ಯಂತ ಸಂಚಲನ ಸೃಷ್ಟಿಯಾಗಿ ಕೊನೆಗೆ ಸುಳ್ಳು ಪ್ರಕರಣ ಎಂದು ಬಯಲಾಗಿ ಚಿನ್ನಯ್ಯ ಆರೋಪಿಯಾಗಿ ಜೈಲು ಪಾಲಾದ. ಇದೀಗ ಷಡ್ಯಂತ್ರ ರೂಪಿಸಿದ ಬುರುಡೆ ಗ್ಯಾಂಗ್ ಸೂತ್ರಧಾರಿಗಳು ಬಂಧನದ ಭೀತಿಯಿಂದ ಹೈಕೋರ್ಟ್ ಗೆ ಎಸ್.ಐ.ಟಿ ತನಿಖೆ ನಡೆಸುತ್ತಿರುವ ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ ಪ್ರಕರಣವನ್ನು ಮತ್ತು ವಿಚಾರಣೆಗೆ ಹಾಜರಾಗುವಂತೆ ನೀಡಿದ ನೋಟೀಸ್ ರದ್ದು ಪಡಿಸಲು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ.
ಉಜಿರೆಯ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ, ಸೌಜನ್ಯ ಮಾವ ವಿಠಲ್ ಗೌಡ ಈ ನಾಲ್ಕು ಜನರಿಂದ ಸೆ.27 ರಂದು ಹೈಕೋರ್ಟ್ ನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 39/25 ಪ್ರಕರಣದಲ್ಲಿ SIT ತನಿಖೆ ನಡೆಸುತ್ತಿರುವ ‘ಹಲವಾರು ಶವ ಹೂತು ಹಾಕಿದ ಪ್ರಕರಣ’ ಮತ್ತು ಎಸ್.ಐ.ಟಿ ವಿಚಾರಣೆಗೆ ಹಾಜರಾಗುವಂತೆ ಅ.24 ರಂದು ನೀಡಿದ ನೋಟಿಸ್ ರದ್ದು ಪಡಿಸುವಂತೆ ಹೈ ಕೋರ್ಟ್ ವಕೀಲ ಬಾಲನ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ನಾಲ್ಕು ಸೂತ್ರಧಾರಿಗಳಿಗೆ ಬೆಳ್ತಂಗಡಿ ಎಸ್ಐಟಿ ವಿಚಾರಣೆಗೆ ಅ.27 ರಂದು ಹಾಜರಾಗುವಂತೆ ಅ.24 ರಂದು ನೋಟಿಸ್ ಜಾರಿ ಮಾಡಿದ್ದ ಬೆನ್ನಲ್ಲೇ ಹೈಕೋರ್ಟ್ ಮೊರೆ ಹೋಗಿ ಬೆಳ್ತಂಗಡಿ ಎಸ್ಐಟಿ ತನಿಖೆಗೆ ಅ.27 ರಂದು ಹಾಜರಾಗದೆ ಮೊಬೈಲ್ ಸ್ಪೀಚ್ ಆಫ್ ಮಾಡಿಕೊಂಡು ವಕೀಲರನ್ನು ಎಸ್ಐಟಿ ಕಚೇರಿಗೆ ಕಳುಹಿಸಿ ಒಂದು ವಾರದ ಸಮಯಾವಕಾಶವನ್ನು ಕೇಳಿಕೊಂಡಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಮತ್ತು ಕುಟುಂಬದವರ ಬಗ್ಗೆ ಹಲವಾರು ರೀತಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಬುರುಡೆ ಸೂತ್ರಧಾರಿಗಳ ಟೀಂ ಇದೀಗ ತಾವೇ ತೋಡಿದ ಗುಂಡಿಗೆ ಬೀಳುವ ಸಮಯದ ನಡುವೆ ಕೊನೆಯ ಅಸ್ತ್ರವಾಗಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸುವ ಮೂಲಕ ಈ ನಾಲ್ಕು ಮಂದಿ ಸೂತ್ರಧಾರಿಗಳ ಒಂದೊಂದೆ ಷಡ್ಯಂತ್ರಗಳು ಬಯಲಾಗುತ್ತಿದೆ.


