Friday, June 5, 2026
Homeತಾಜಾ ಸುದ್ದಿಸುರತ್ಕಲ್: ಪೈಪ್‌ಲೈನ್ ಕಾಮಗಾರಿ ವೇಳೆ ಕಟ್ಟಡದಲ್ಲಿ ಬಿರುಕು

ಸುರತ್ಕಲ್: ಪೈಪ್‌ಲೈನ್ ಕಾಮಗಾರಿ ವೇಳೆ ಕಟ್ಟಡದಲ್ಲಿ ಬಿರುಕು

- Advertisement -
- Advertisement -

ಸುರತ್ಕಲ್: ಸುರತ್ಕಲ್ ಜಂಕ್ಷನ್ನಲ್ಲಿ ಮನೆಮನೆ ಗ್ಯಾಸ್ ಸಂಪರ್ಕ ಕಲ್ಪಿಸುವ ಯೋಜನೆಯ ಕಾಮಗಾರಿ ನಡೆಯುತ್ತಿದ್ದ ವೇಳೆ ಹೆದ್ದಾರಿಯ ಸಹಿತ ಸುತ್ತಮುತ್ತಲು ಇರುವ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡ ಪರಿಸ್ಥಿತಿ ಎದುರಾಗಿದೆ.


ಶುಕ್ರವಾರದಂದು ತಡರಾತ್ರಿ ಭೂಗತ ರಂದ್ರ ಮಾಡುವ ವೇಳೆ ಯಂತ್ರಗಳ ಒತ್ತಡ ಹೆಚ್ಚಾದ ಕಾರಣ ಹತ್ತಿರದ ಸಿಸಿ ಲಂಚ್ ಹೋಂ ಮುಂಭಾಗ ಹಾಕಲಾಗಿದ್ದ ಸಿಮೆಂಟ್ ಗಳು ಎದ್ದು ಹೋಗಿದ್ದು, ಅಲ್ಲಿರುವ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ ಮತ್ತು ಸದನದ ಮುಂಭಾಗದ ಇಂಟರ್ಲಾಕ್ ಗೆ ಹಾನಿಯಾಗಿದೆ ಅಲ್ಲದೆ ಹೆದ್ದಾರಿ ೬೬ರಲ್ಲಿ ಡಾಮರು ಸೀಳಾಗಿ ಹೋಗಿದೆ, ನೀರಿನ ಪೈಪ್ಗಳು ತುಂಡಾಗಿವೆಎoದು ಹೇಳಲಾಗಿದೆ.


ಆದಾನಿ ಸಂಸ್ಥೆ ಗ್ಯಾಸ್ಪೈಪ್ಲೈನ್ ಹಾಕುವ ಗುತ್ತಿಗೆ ಪಡೆದಿದ್ದು, ಉಪ ಗುತ್ತಿಗೆ ಪಡೆದಿರುವ ಸದರ್ನ್ ಟೆಲಿಕಾಂ ಕಾಮಗಾರಿ ನಡೆಸುತ್ತಿದೆ. ನಿರೀಕ್ಷಿಸಿದ ಆಳದಲ್ಲಿ ಪೈಪುಗಳನ್ನು ಹಾಕದೆ ಇರುವುದರಿಂದ ಕಟ್ಟಡಗಳಿಗೆ ಹಾನಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ ಜೊತೆಗೆ ಎಲ್ಲ ಕಟ್ಟಡದ ಮಾಲೀಕರು ಅವೈಜ್ಞಾನಿಕ ಕಾಮಗಾರಿ ವಿರುದ್ಧ ದೂರು ದಾಖಲು ಮಾಡಲು ಮುಂದಾಗಿದ್ದಾರೆ.

- Advertisement -

Latest News

error: Content is protected !!