Tuesday, April 30, 2024
Homeತಾಜಾ ಸುದ್ದಿಕೆಎಸ್ಆರ್ ಟಿಸಿ - ಇನ್ನೋವಾ ಪರಸ್ಪರ ಡಿಕ್ಕಿ; ಭೀಕರ ಅಪಘಾತಕ್ಕೆ ತಾಯಿ, ಮಗು ದಾರುಣ ಸಾವು

ಕೆಎಸ್ಆರ್ ಟಿಸಿ – ಇನ್ನೋವಾ ಪರಸ್ಪರ ಡಿಕ್ಕಿ; ಭೀಕರ ಅಪಘಾತಕ್ಕೆ ತಾಯಿ, ಮಗು ದಾರುಣ ಸಾವು

spot_img
- Advertisement -
- Advertisement -

ರಾಮನಗರ: ಜಿಲ್ಲೆಯಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ನಡೆದಿದೆ. ಹಲಗೂರು ಕನಕಪುರ ಮುಖ್ಯ ರಸ್ತೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಹಾಗೂ ಇನ್ನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.


6 ತಿಂಗಳ ಮಗು ಸುಮಂತ್ ಸೇರಿದಂತೆ ಉಡುಪಿ ಮೂಲದ ಅಕ್ಷತಾ ಹಾಗೂ ಡ್ರೈವರ್ ಉಮೇಶ್ ಮೃತ ದುರ್ದೈವಿಗಳು. ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ತೀವ್ರತೆಗೆ ಮಗು ಸುಮಂತನ ಮುಖದ ಒಂದು ಭಾಗ ಬೇರ್ಪಟ್ಟಿದೆ.


ರಸ್ತೆಯಲ್ಲಿ ತಾಯಿ-ಮಗು ಕೊನೆಯುಸಿರೆಳೆದಿದ್ದಾರೆ.ಘಟನೆಯಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -
spot_img

Latest News

error: Content is protected !!