Friday, June 26, 2026
Homeಕರಾವಳಿಮಂಗಳೂರುಬಂಟ್ವಾಳ: ಮದುವೆಯ ದಿನವೇ ಮುಂಜಾನೆ ವಧು ನಾಪತ್ತೆ

ಬಂಟ್ವಾಳ: ಮದುವೆಯ ದಿನವೇ ಮುಂಜಾನೆ ವಧು ನಾಪತ್ತೆ

- Advertisement -
- Advertisement -

ಬಂಟ್ವಾಳ: ಮದುವೆಯ ದಿನವೇ ಮುಂಜಾನೆ ವಧು ನಾಪತ್ತೆಯಾಗಿರುವ ಘಟನೆ  ಬಿ.ಸಿ.ರೋಡಿನ ಪಲ್ಲಮಜಲಿನಲ್ಲಿ ನಡೆದಿದೆ. ಪಲ್ಲಮಜಲು ನಿವಾಸಿ ಅಶ್ಚಿಯ (21) ನಾಪತ್ತೆಯಾದವರು.

ಅಶ್ಚಿಯ ಅವರ ವಿವಾಹ ಮಂಗಳೂರಿನ ಯುವಕನೊಂದಿಗೆ ಡಿ. 14ರಂದು ತೊಕ್ಕೊಟ್ಟಿನ ಸಭಾಂಗಣದಲ್ಲಿ ನಡೆಯಬೇಕಿತ್ತು. ಮುಂಜಾನೆ 3.30ರ ಸುಮಾರಿಗೆ ಆಕೆ ಮಲಗಿರುವುದನ್ನು ಮನೆಮಂದಿ ಕಂಡಿದ್ದರು. ಮತ್ತೆ 4.30ರ ಸುಮಾರಿಗೆ ನೋಡಿದಾಗ ನಾಪತ್ತೆಯಾಗಿದ್ದರು. ಎಲ್ಲೆಡೆ ಹುಡುಕಿದರೂ ಪತ್ತೆಯಾಗಿಲ್ಲ ಎಂದು ಸಹೋದರ ಅರ್ಶದ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಕೆಗಾಗಿ ಶೋಧ ನಡೆಸುತ್ತಿದ್ದಾರೆ.

ಆಕೆಯ ಜತೆ ಮದುವೆ ನಿಗದಿಯಾಗಿದ್ದ ವರನ ಮನೆಯವರು ಕೂಡ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವರನ ಕಡೆಯಿಂದ ಆಕೆಗೆ ನೀಡಿದ್ದ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!