Thursday, May 2, 2024
Homeತಾಜಾ ಸುದ್ದಿಸಾಂಪ್ರದಾಯಿಕ ಉಡುಗೆಗೆ ಟಾಟಾ ಹೇಳಿದ ವಧು: ಸೂಟ್ ಧರಿಸಿ ಹಸೆಮಣೆ ಏರಿದ ಮದುಮಗಳು

ಸಾಂಪ್ರದಾಯಿಕ ಉಡುಗೆಗೆ ಟಾಟಾ ಹೇಳಿದ ವಧು: ಸೂಟ್ ಧರಿಸಿ ಹಸೆಮಣೆ ಏರಿದ ಮದುಮಗಳು

spot_img
- Advertisement -
- Advertisement -

ನವದೆಹಲಿ: ಜೀವನದಲ್ಲಿ ಹೆಣ್ಣುಮಕ್ಕಳಿಗೆ ಅತ್ಯಂತ ಸುಂದರವಾಗಿ ರೆಡಿಯಾಗೋದಕ್ಕೆ ಸರಿಯಾದ ಅವಕಾಶ ಸಿಗೋದು ಅವರ ಮದುವೆ ದಿನ ಮಾತ್ರ. ಮದುವೆ ದಿನ ವಧು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು ತಮ್ಮ ಮದುವೆಗೆ ಎಲ್ಲ ಸಂಪ್ರದಾಯಗಳನ್ನು ಮುರಿದು ಸಖತ್ ಟ್ರೆಂಡಿ ಡ್ರೆಸ್​​ ತೊಟ್ಟಿದ್ದಾರೆ.

ಇಂಡೊ-ಅಮೆರಿಕನ್​ ಉದ್ಯಮಿ ಸಂಜನಾ ರಿಷಿ ಹಾಗೂ ದೆಹಲಿ ಮೂಲದ ಉದ್ಯಮಿ ಧ್ರುವ್​ ಮಹಾಜನ್​ ಇತ್ತೀಚೆಗಷ್ಟೆ ವಿವಾಹವಾಗಿದ್ದಾರೆ.ಈ ಜೋಡಿಯ ಮದುವೆ ದೆಹಲಿಯಲ್ಲಿ ನಡೆದಿದೆ. ಮದುಮಗಳಾಗಿದ್ದ ಸಂಜನಾ ರಿಷಿ ತಮ್ಮ ಮದುವೆಗೆ ಲೆಹೆಂಗಾ ಬಿಟ್ಟು ವಿನ್ಯಾಸಿತ ಪ್ಯಾಂಟ್​ಸೂಟ್​ ಧರಿಸಿದ್ದು ವಿಶೇಷವಾಗಿತ್ತು.

ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮದುವೆ ದಿನ ಸಾಂಪ್ರದಾಯಿಕ ಉಡುಗೆ ತೊಡಲು ಬಯಸುತ್ತಾರೆ.ಆದರೆ ಈಕೆ ಮಾರ್ಡನ್ ಔಟ್ ಫಿಟ್ ನಲ್ಲಿ ಮಿಂಚಿ ಸುದ್ದಿಯಾಗಿದ್ದಾಳೆ.

- Advertisement -
spot_img

Latest News

error: Content is protected !!