Thursday, June 4, 2026
Homeತಾಜಾ ಸುದ್ದಿಮದುವೆಯ ವಿಧಿವಿಧಾನಗಳಾಗುತ್ತಿದ್ದಾಗಲೇ ಕುಸಿದು ಬಿದ್ದು ಮದುಮಗಳು ಸಾವು

ಮದುವೆಯ ವಿಧಿವಿಧಾನಗಳಾಗುತ್ತಿದ್ದಾಗಲೇ ಕುಸಿದು ಬಿದ್ದು ಮದುಮಗಳು ಸಾವು

- Advertisement -
- Advertisement -

ಹೈದರಾಬಾದ್: ಮದುವೆಯ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಕುಸಿದು ಬಿದ್ದು ಮದುಮಗಳು ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ

ವಿಶಾಖಪಟ್ಟಣಂನಲ್ಲಿರುವ ಮಧುರವಾಡದ ಫಂಕ್ಷನ್ ಹಾಲ್‍ನಲ್ಲಿ ನಿನ್ನೆ ಸಂಜೆ ಮದುವೆ ಸಮಾರಂಭದ ವಿಧಿ, ವಿಧಾನಗಳು ನಡೆಯುತ್ತಿತ್ತು. ಈ ವೇಳೆ ವಧು ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಕುಟುಂಬಸ್ಥರು ಹಾಗೂ ಸಂಬಂಧಿಕರು ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಧು ನಿನ್ನೆ ಸಾವನ್ನಪ್ಪಿದ್ದಾಳೆ.

ಮೃತ ದುರ್ದೈವಿಯನ್ನು ಸೃಜನಾ ಎಂದು ಗುರುತಿಸಲಾಗಿದ್ದು, ಮೇಲ್ನೋಟಕ್ಕೆ ವಿಷ ಸೇವಿಸಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!