Thursday, June 4, 2026
Homeತಾಜಾ ಸುದ್ದಿಕಡಬ: ಬ್ಯಾಂಕ್‌ ಸಿಬ್ಬಂದಿಗೆ ಸಿಕ್ಕ ಚಿನ್ನದ ಸರ: ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ: ವಾರಸುದಾರರು...

ಕಡಬ: ಬ್ಯಾಂಕ್‌ ಸಿಬ್ಬಂದಿಗೆ ಸಿಕ್ಕ ಚಿನ್ನದ ಸರ: ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವ್ಯಕ್ತಿ: ವಾರಸುದಾರರು ಕಡಬ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರ ಮನವಿ

- Advertisement -
- Advertisement -

ಕಡಬ: ಇಲ್ಲಿನ ಫೆಡರಲ್ ಬ್ಯಾಂಕಿನ ಸಮೀಪ ಅಲ್ಲಿನ ಸಿಬ್ಬಂದಿ ಜೆರಿನ್ ಎಂಬುವರಿಗೆ ಚಿನ್ನದ ಸರವೊಂದು ಸಿಕ್ಕಿದ್ದು, ಅದನ್ನು ಅವರು ಪತ್ರಕರ್ತ ಪ್ರಕಾಶ್ ಅವರಿಗೆ ತಲುಪಿಸಿದರು. ಪ್ರಕಾಶ್ ಅವರು ಸರವನ್ನು ಕಡಬ ಪೊಲೀಸ್ ಠಾಣೆಯ ಎ.ಎಸ್.ಐ ಸುರೇಶ್ ಅವರ ಮೂಲಕ ಕಡಬ ಪೊಲೀಸ್ ಠಾಣೆಗೆ ನೀಡಿರುತ್ತಾರೆ.

ಈ ಚಿನ್ನದ ಸರದ ವಾರಸುದಾರರು ಸರಿಯಾದ ಮಾಹಿತಿ, ತೂಕ ಅಥವಾ ದಾಖಲೆಗಳನ್ನು ನೀಡಿ ಕಡಬ ಪೊಲೀಸ್ ಠಾಣೆಯಿಂದ ಚಿನ್ನದ ಸರವನ್ನು ಪಡೆದುಕೊಳ್ಳಬಹುದು ಎಂದು ಕಡಬ ಠಾಣಾಧಿಕಾರಿ ಆಂಜನೇಯ ರೆಡ್ಡಿ ಅವರು ತಿಳಿಸಿದ್ದಾರೆ.

- Advertisement -

Latest News

error: Content is protected !!