Saturday, June 6, 2026
Homeತಾಜಾ ಸುದ್ದಿಸಂಪಾಜೆ: ಚೆಕ್‌ಪೋಸ್ಟ್‌ ನಲ್ಲಿ ಎಂಟ್ರಿ ಫೀಸ್‌ ನೆಪದಲ್ಲಿ ಲಂಚ ಕೇಳಿದ ಅಧಿಕಾರಿ: ವೈರಲ್‌ ಆಯ್ತು ಅಧಿಕಾರಿಯ...

ಸಂಪಾಜೆ: ಚೆಕ್‌ಪೋಸ್ಟ್‌ ನಲ್ಲಿ ಎಂಟ್ರಿ ಫೀಸ್‌ ನೆಪದಲ್ಲಿ ಲಂಚ ಕೇಳಿದ ಅಧಿಕಾರಿ: ವೈರಲ್‌ ಆಯ್ತು ಅಧಿಕಾರಿಯ ಲಂಚ ದಾಹದ ವಿಡಿಯೋ

- Advertisement -
- Advertisement -

ಸಂಪಾಜೆ: ಪಿಕಪ್ ಚಾಲಕನ ಜೊತೆ ಎಂಟ್ರಿ ಫೀಸ್ ನೆಪದಲ್ಲಿ ಲಂಚ ಕೇಳುತ್ತಿರುವ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಕಪ್ ಚಾಲಕನೋರ್ವ ಮಡಿಕೇರಿಯಿಂದ ಭತ್ತದ ಹೊಟ್ಟನ್ನು ಸುಳ್ಯದ ಮರ್ಕಂಜದಲ್ಲಿರುವ ಕೋಳಿ ಫಾರ್ಮಿಗೆ ತರುತ್ತಿರುವಾಗ ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಗಾಡಿಯನ್ನು ಪರಿಶೀಲನೆ ಮಾಡಿದ್ದಾರೆ.

ಬಳಿಕ ಅಲ್ಲಿರುವ ಅಧಿಕಾರಿಯೊಬ್ಬ ಗಾಡಿಯ ಮಾಹಿತಿಯನ್ನು ಪಡೆದು ನಂತರ ಆತನ ಜೊತೆ ಎಂಟ್ರಿಫೀಸ್ ನೀಡಬೇಕು ಎನ್ನುವ ರೀತಿಯಲ್ಲಿ ಲಂಚ ಕೇಳುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇದೇ ಪಿಕಪ್ ಚಾಲಕನ ಬಳಿ ಈ ಹಿಂದೆಯೂ ಈ ಅಧಿಕಾರಿ ಇಂತಹ ವರ್ತನೆ ತೋರಿದ್ದು, ಮತ್ತೆ ಎರಡನೇ ಬಾರಿ ಎಂಟ್ರಿಫೀಸ್ ಕೇಳುತ್ತಿರುವುದು ಕಂಡುಬಂದಿದೆ.

ಸಂಪಾಜೆ ಚೆಕ್ ಪೋಸ್ಟ್ ನಲ್ಲಿ ಲಂಚಾವತಾರದ ವಿಡಿಯೋಗಳು ವೈರಲ್ ಆಗಿದ್ದವು. ಇದರಿಂದ ಅರಣ್ಯಾಧಿಕಾರಿಯೋರ್ವರು ಅಮಾನತುಗೊಂಡಿದ್ದು, ಇದಕ್ಕೆ ಈ ಘಟನೆ ಹೊಸ ಸೇರ್ಪಡೆಯಾಗಿದೆ.

- Advertisement -

Latest News

error: Content is protected !!