Wednesday, May 8, 2024
Homeಕರಾವಳಿಬೆಳ್ತಂಗಡಿ : ಟ್ರಸ್ಟ್ ಹೆಸರಲ್ಲಿ ದೇಣಿಗೆ ಸಂಗ್ರಹಕ್ಕೆ ಬರೋರಿಗೆ ದುಡ್ಡು ಕೊಡೋ ಮೊದಲು ಈ ಸುದ್ದಿ...

ಬೆಳ್ತಂಗಡಿ : ಟ್ರಸ್ಟ್ ಹೆಸರಲ್ಲಿ ದೇಣಿಗೆ ಸಂಗ್ರಹಕ್ಕೆ ಬರೋರಿಗೆ ದುಡ್ಡು ಕೊಡೋ ಮೊದಲು ಈ ಸುದ್ದಿ ಓದಿ; ಮಿಸ್ ಮಾಡದೇ ಎಲ್ಲರೂ ಓದಬೇಕಾದ ನ್ಯೂಸ್

spot_img
- Advertisement -
- Advertisement -

ಬೆಳ್ತಂಗಡಿ : ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ಹೆಸರಲ್ಲಿ ದೇಣಿಗೆ ಸಂಗ್ರಹಿಸಲು ಬಂದ ಇಬ್ಬರು ಅಪ್ರಾಪ್ತ ಬಾಲಕ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ನಿಡ್ಲೆ ಗ್ರಾಮ, ಬೆಳ್ತಂಗಡಿ ನಿವಾಸಿ ಧನುಷ್‌ (24) ಎಂಬವರ ದೂರಿನಂತೆ ಪ್ರಕರಣ ದಾಖಲಾಗಿದೆ.

ಧನುಷ್ ನಿಡ್ಲೆ ಗ್ರಾಮದ ಪರಾಂಡ ಎಂಬಲ್ಲಿ ತಮ್ಮ ಮನೆಯಲ್ಲಿರುವಾಗ, ಇಬ್ಬರು ಅಪ್ರಾಪ್ತ ಬಾಲಕರು ಬಂದು ನಾವು ಬೆಂಗಳೂರಿನಲ್ಲಿರುವ ಸ್ವಾಮಿ ವಿವೇಕಾನಂದ ಎಂಬ ಸೋಷಿಯಲ್‌ ಸರ್ವಿಸ್‌ ಟ್ರಸ್ಟ್‌ (ರಿ) ಇದರ ವತಿಯಿಂದ ದೇಣಿಗೆ ಸಂಗ್ರಹಣೆಗೆ ಬಂದಿದ್ದು, ದೇಣಿಗೆ ನೀಡುವಂತೆ ಕೇಳಿದ್ದಾರೆ. ಧನುಷ್ ಅವರು ಸಂಶಯಗೊಂಡು ಅವರಲ್ಲಿದ್ದ ಸಂಸ್ಥೆಯದ್ದು ಎನ್ನಲಾದ  ಮೊಬೈಲ್‌ ನಂಬರ್‌ಗೆ ಕರೆ ಮಾಡಿ ವಿಚಾರಿಸಿದಾಗ ನಾವು ಯಾರನ್ನೂ ಕಳುಹಿಸಿರುವುದಿಲ್ಲವೆಂದು ತಿಳಿಸಿರುತ್ತಾರೆ. ಆದ್ದರಿಂದ ಚಾಲ್ತಿಯಲ್ಲಿ ಇಲ್ಲದೇ ಇರುವ ಸಂಸ್ಥೆಯ ಹೆಸರಿನಲ್ಲಿ ಹಣ ಸಂಗ್ರಹಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವುದಾಗಿ ಧನುಷ್ ದೂರು ನೀಡಿದ್ದು ಅದರಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ  99/2023 ಕಲಂ: 420 ಜೊತೆಗೆ 34 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!