- Advertisement -
![]()
- Advertisement -
ಮಂಗಳೂರು: ಕರಾವಳಿಯಲ್ಲಿ ಮತ್ತೆ ಧರ್ಮ ದಂಗಲ್ ಮುಂದುವರೆದಿದೆ. ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ಜಾತ್ರೆಯು ಇಂದಿನಿಂದ ಜ.18 ರವರೆಗೆ ನಡೆಯಲಿದ್ದು ಈ ಜಾತ್ರೆಯಲ್ಲಿ ಅನ್ಯಧರ್ಮದವರ ವ್ಯಾಪಾರ ಬಹಿಷ್ಕರಿಸಲಾಗಿದೆ.
ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಕ್ಷೇತ್ರದಲ್ಲಿ ವ್ಯಾಪಾರಿ ಧರ್ಮದಂಗಲ್ ಶುರುವಾಗಿದೆ. ಹಿಂದೂ ವ್ಯಾಪಾರಿಗಳಿಗಷ್ಟೇ ಜಾತ್ರೆಯಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ಬಗ್ಗೆ ವಿಎಚ್ ಪಿ-ಭಜರಂಗದಳದವರು ವಿಗ್ರಹಾರಧನೆ ಹರಾಂ ಎಂದು ನಂಬಿದ ಯಾರಿಗೂ ವ್ಯಾಪಾರದ ಅವಕಾಶವಿಲ್ಲ’ ಎಂದು ಬ್ಯಾನರ್ ಕೂಡಾ ಅಳವಡಿಸಿದ್ದಾರೆ .ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಅನ್ಯಧರ್ಮೀಯರಿಗೆ ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ ವ್ಯಾಪಾರ ನಿಷೇಧಿಸಿದ್ದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
- Advertisement -


