Friday, June 5, 2026
Homeಕರಾವಳಿಕಡಬದಲ್ಲಿ ವ್ಯಕ್ತಿಯೊಬ್ಬರ ಪರ್ಸ್ ಕದ್ದ ಅಪ್ರಾಪ್ತರು: ಬಾಲಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಕಡಬದಲ್ಲಿ ವ್ಯಕ್ತಿಯೊಬ್ಬರ ಪರ್ಸ್ ಕದ್ದ ಅಪ್ರಾಪ್ತರು: ಬಾಲಕರಿಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

- Advertisement -
- Advertisement -

ಕಡಬ : ವ್ಯಕ್ತಿಯೊಬ್ಬರ ಪರ್ಸ್ ಕದ್ದ ಅಪ್ರಾಪ್ತ ಬಾಲಕರನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಕಡಬದ ಕೇವಳ ಎಂಬಲ್ಲಿ ನಡೆದಿದೆ.

ಇಂದು ಬಾಲಕರಿಬ್ಬರು ಕೇವಳದಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಇದೇ ವೇಳೆ ರಿಕ್ಷಾದಲ್ಲಿ ಬಂದಿಳಿದ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಬಾಲಕರು ಅವರ ಪರ್ಸ್ ಕದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಬಾಲಕರನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಹೆತ್ತವರನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!