Thursday, June 4, 2026
Homeಕರಾವಳಿಮಂಗಳೂರು; ಸಮುದ್ರಕ್ಕೆ ಬಿದ್ದು ಬಾಲಕ ಸಾವು

ಮಂಗಳೂರು; ಸಮುದ್ರಕ್ಕೆ ಬಿದ್ದು ಬಾಲಕ ಸಾವು

- Advertisement -
- Advertisement -

ಮಂಗಳೂರು; ಸಮುದ್ರಕ್ಕೆ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಪಣಂಬೂರಿನಲ್ಲಿ ಇಂದು ಸಂಜೆ ನಡೆದಿದೆ. ತೋಟಬೆಂಗ್ರೆ ಮಿಥುನ್‌ ಎಂಬವರ ಪುತ್ರ ಪ್ರಜೀತ್‌ (15) ಮೃತ ಬಾಲಕ. ಪ್ರಜೀತ್ ತಂದೆಯೊಂದಿಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾನೆ.

ದೋಣಿಯಲ್ಲಿ ತೆರಳುತ್ತಿದ್ದಾಗ ಬಾಲಕ ನೀರಿಗೆ ಬಿದ್ದಿದ್ದಾನೆ.ಮೀನುಗಾರರು ರಕ್ಷಣೆಗಾಗಿ ತತ್ಕ್ಷಣ ಕಾರ್ಯಾಚರಣೆ ನಡೆಸಿದರೂ ತೆರೆಗಳ ನಡುವೆ ಸಿಲುಕಿದ ಆತನನ್ನು ಪತ್ತೆ ಮಾಡುವಾಗ ಒಂದು ತಾಸು ವಿಳಂಬವಾಗಿದೆ. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಮೃತಪಟ್ಟಿದ್ದ. ಈ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

- Advertisement -

Latest News

error: Content is protected !!