Wednesday, May 1, 2024
Homeತಾಜಾ ಸುದ್ದಿ200 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

200 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಬಾಲಕ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

spot_img
- Advertisement -
- Advertisement -

ಮಧ್ಯಪ್ರದೇಶ: ತೆರೆದ ಕೊಳವೆ ಬಾವಿಗಳಿಂದ ಆಗಿರುವ ದುರಂತಗಳು ಒಂದೆರಡಲ್ಲ. ಅದೆಷ್ಟೋ ಮಕ್ಕಳನ್ನು ಕೊಳವೆ ಬಾವಿಗಳು ಬಲಿ ಪಡೆದಿವೆ. ಇಂತಹದ್ದೇ ದುರಂತವೊಂದು ಮಧ್ಯಪ್ರದೇಶದಲ್ಲಿ ಮತ್ತೆ ಮರುಕಳಿಸಿದೆ.

ಐದು ವರ್ಷದ ಬಾಲಕನೊಬ್ಬ 200 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದಾನೆ. ಇದೀಗ ಬಾಲಕನ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

‘ಕಾರ್ಮಿಕರು ಕೊಳವೆ ಬಾವಿಯ ದುರಸ್ತಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಾಲಕ ಪ್ರಹ್ಲಾದ್‌ ಕೊಳವೆ ಬಾವಿಗೆ ಬಿದ್ದಿದ್ದಾನೆ. ಕೊಳವೆ ಬಾವಿಯಲ್ಲಿ ನೆಲದಿಂದ 100 ಅಡಿಗಳಷ್ಟು ನೀರು ಇದೆ. ಬಾಲಕ ಎಷ್ಟು ಆಳದಲ್ಲಿ ಸಿಲುಕಿಕೊಂಡಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!