Saturday, April 27, 2024
Homeಕರಾವಳಿಸುಳ್ಯ; ಕ್ಯಾನ್ಸರ್ ಪೀಡಿತರಿಗಾಗಿ ಮಿಡಿದ ಪುಟ್ಟ ಬಾಲಕನ ಹೃದಯ; 3 ವರ್ಷ ಕೂದಲು ಬೆಳೆಸಿ ದಾನ...

ಸುಳ್ಯ; ಕ್ಯಾನ್ಸರ್ ಪೀಡಿತರಿಗಾಗಿ ಮಿಡಿದ ಪುಟ್ಟ ಬಾಲಕನ ಹೃದಯ; 3 ವರ್ಷ ಕೂದಲು ಬೆಳೆಸಿ ದಾನ ಮಾಡಿದ ಪೋರ

spot_img
- Advertisement -
- Advertisement -

ಸುಳ್ಯ: ಕ್ಯಾನ್ಸರ್ ಪೀಡಿತ ನೋವಿಗೆ ಸ್ಪಂದಿಸಿದ 5ನೇ ತರಗತಿ ಬಾಲಕನೊಬ್ಬ ತನ್ನ ಕೂದಲನ್ನು ಅವರಿಗಾಗಿ ದಾನ ಮಾಡಿ ಮಾನವೀಯತೆ ಮೆರೆದಿದ್ದಾನೆ.

ಅಡೂರು ಗ್ರಾಮದ ಮಣಿಯೂರಿನ ನವೀನ್ ರಾವ್ ಸಿಂಧ್ಯಾ ಹಾಗೂ ಭವಾನಿ ದಂಪತಿಗಳ 11 ವರ್ಷದ ಪುತ್ರ ರತೀಶ್ ಸಿ ಕ್ಯಾನ್ಸರ್ ಪೀಡಿತರಿಗೆ ಕೇಶದಾನ ಮಾಡುವ ಮೂಲಕ ಮಾದರಿಯಾಗಿದ್ದಾನೆ.

 ರತೀಶ್ 8 ವರ್ಷದವನಿದ್ದಾಗಲೇ ತನ್ನ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದನು. ತಂದೆ ತಾಯಿ ಈತನ ಒಳ್ಳೆಯ ಉದ್ದೇಶಕ್ಕೆ ಬೆಂಬಲ ನೀಡಿದ್ದರು.ಅದರಂತೆ ಮೂರು ವರ್ಷಗಳ ಕಾಲ ಬೆಳೆಸಿದ ಕೂದಲನ್ನು ಆತ ಇದೀಗ ಕತ್ತರಿಸಿ ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಉದಯಭಾಸ್ಕರ್ ಅವರ ಮೂಲಕ ಕ್ಯಾನ್ಸರ್ ಪೀಡಿತರಿಗೆ ಹಸ್ತಾಂತರಿಸಿರುತ್ತಾನೆ.

ಈತ ಪ್ರಸ್ತುತ ಈಶ್ವರಮಂಗಲದ ಶ್ರೀ ಗಜಾನನ ಶಾಲೆಯಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

- Advertisement -
spot_img

Latest News

error: Content is protected !!