Thursday, June 4, 2026
Homeಕರಾವಳಿಉಡುಪಿಉಡುಪಿ; ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ 4ನೇ ತರಗತಿ ಬಾಲಕ ಸಾವು

ಉಡುಪಿ; ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ 4ನೇ ತರಗತಿ ಬಾಲಕ ಸಾವು

- Advertisement -
- Advertisement -

ಉಡುಪಿ; ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ 4ನೇ ತರಗತಿ ಬಾಲಕ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ರೆಸಾರ್ಟ್ ನಲ್ಲಿ ನಡೆದಿದೆ.ಮುಹಮ್ಮದ್ ಅರೀಝ್ (10) ಮೃತ ಬಾಲಕ.

ಮುಹಮ್ಮದ್ ಅರೀಝ್   ಕುಟುಂಬ ಸದಸ್ಯರೊಂದಿಗೆ ಟಿನ್ ಟಾನ್ ಎಡ್ವೆಂಚರ್ಸ್’ ರೆಸಾರ್ಟ್ ಗೆ ಹೋಗಿದ್ದ.  ಈ ವೇಳೆ  ಆಟವಾಡುವಾಗ ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಾಲಕ ಹೂಡೆಯ ದಾರುಸ್ಸಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ.

ಸ್ವಿಮಿಂಗ್ ಫುಲ್’ನ ನೀರಿಗೆ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಿಸದೆ ಬಾಲಕ  ಕೊನೆಯುಸಿರೆಳೆದಿದ್ದಾನೆ.
ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಅನಾಹುತ ನಡೆದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

- Advertisement -

Latest News

error: Content is protected !!