Wednesday, June 26, 2024
Homeತಾಜಾ ಸುದ್ದಿಕೇರಳದಲ್ಲಿ ಮಂಕಿ ಫಾಕ್ಸ್ ಆತಂಕದ ಬೆನ್ನಲ್ಲೇ ಸ್ಕ್ರಬ್ ಟೈಫಸ್ ಗೆ ಬಾಲಕ ಬಲಿ

ಕೇರಳದಲ್ಲಿ ಮಂಕಿ ಫಾಕ್ಸ್ ಆತಂಕದ ಬೆನ್ನಲ್ಲೇ ಸ್ಕ್ರಬ್ ಟೈಫಸ್ ಗೆ ಬಾಲಕ ಬಲಿ

spot_img
- Advertisement -
- Advertisement -

ಕೇರಳ:  ಮಂಕಿ ಫಾಕ್ಸ್ ಆತಂಕದ ಬೆನ್ನಲ್ಲೇ ಕೇರಳದಲ್ಲಿ  ಸ್ಕ್ರಬ್ ಟೈಫಸ್ ಗೆ ಬಾಲಕ ಬಲಿಯಾಗಿದ್ದಾನೆ.

ಕಿಲಿಮನೂರು ಮೂಲದ ಸಿದ್ಧಾರ್ಥ್ (11) ಮೃತ ಬಾಲಕ.

ಬಾಲಕ ಕಿಲಿಮನೂರಿನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದ. ಜ್ವರ ಕಾಣಿಸಿಕೊಂಡ‌ ಹಿನ್ನೆಲೆ ಚಿಕಿತ್ಸೆ ಪಡೆದಿದ್ದ. ಆದರೆ ಜ್ವರ ನಿಯಂತ್ರಣಕ್ಕೆ‌ ಬಾರದ ಹಿನ್ನೆಲೆ ಬಾಲಕನನ್ನು ಎಸ್‌ಎಟಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸ್ಕ್ರಬ್ ಟೈಫಸ್ ಸೋಂಕಿನ ರೋಗ ಲಕ್ಷಣಗಳೇನು?
ಸಾಮಾನ್ಯವಾಗಿ ಸೋಂಕಿಗೆ ಒಳಗಾದ ಅಥವಾ ಹುಳ ಕಚ್ಚಿದ 10 ದಿನಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಶೀತ ಮತ್ತು ಜ್ವರ, ತಲೆನೋವು, ಮೈಕೈ ನೋವು, ಸ್ನಾಯು ಸೆಳೆತ, ಕಚ್ಚಿದ ಸ್ಥಳದಲ್ಲಿ ಕಪ್ಪು ಬಣ್ಣ ಆಗುವುದು, ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ ಈ ರೋಗದ ಗುಣಲಕ್ಷಣಗಳಾಗಿವೆ.

ಸ್ಕ್ರಬ್​ ಟೈಪಸ್ ಸೋಂಕನ್ನು ‘ಬುಷ್ ಟೈಫಸ್’ ಎಂದೂ ಕರೆಯಲಾಗುತ್ತದೆ. ಇದು ಓರಿಯೆಂಟಿಯಾ ಸುಸುಂಗಾಮುಶಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಖಾಯಿಲೆಯಾಗಿದೆ. ಇದು ಬ್ಯಾಕ್ಟೀರಿಯಾ ಸೋಂಕಿತ ಲಾರ್ವಾ ಹುಳುಗಳ ಮುಖಾಂತರ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿಗೆ ಕಡಿದು ಸ್ಕ್ರಬ್​ ಟೈಫಸ್ ಜ್ವರಕ್ಕೆ ತುತ್ತಾದ ಲಾರ್ವಾಹುಳುಗಳು ಇನ್ನೊಬ್ಬರಿಗೆ ಕಚ್ಚಿದಾಗ ಅವರಲ್ಲಿಯೂ ಈ ಜ್ವರ ಕಾಣಿಸಿಕೊಳ್ಳುತ್ತದೆ

- Advertisement -
spot_img

Latest News

error: Content is protected !!