- Advertisement -


- Advertisement -
ಮಂಗಳೂರು;: ಗೆಳೆಯರೊಂದಿಗೆ ವಾಲಿಬಾಲ್ ಆಡುತ್ತಿದ್ದ 15 ವರ್ಷದ ಶಾಲಾ ಬಾಲಕನೊಬ್ಬ ಮೈದಾನದಲ್ಲೇ ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಸಮೀಪದ ಸೂರಿಂಜೆಯಲ್ಲಿ ಬುಧವಾರ ಸಂಜೆ ನಡೆದಿದೆ.
ಸೂರಿಂಜೆಯ ಕೋಟೆ ಬೋಳ್ಳಾರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ, ಮಾಧವ ಅಮೀನ್ ಎಂಬುವರ ಪುತ್ರ ಲಿಖಿತ್ ಅಮೀನ್ (15) ಮೃತಪಟ್ಟ ಬಾಲಕ.
ಬುಧವಾರ ಸಂಜೆ ಸೂರಿಂಜೆ ಮೈದಾನದಲ್ಲಿ ಲಿಖಿತ್ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದಾಗ ಏಕಾಏಕಿ ತೀವ್ರ ಅಸ್ವಸ್ಥಗೊಂಡು ನೆಲಕ್ಕೆ ಕುಸಿದಿದ್ದಾನೆ. ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆತ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಆಟವಾಡುವಾಗ ಉಂಟಾದ ತೀವ್ರ ಹೃದಯಾಘಾತದಿಂದ ಈ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
- Advertisement -


