Friday, June 5, 2026
Homeಕರಾವಳಿತಾನು ಸಾಕಿದ್ದ ಮೀನು ಸತ್ತಿದ್ದಕ್ಕೆ ನೇಣಿಗೆ ಶರಣಾದ ಬಾಲಕ

ತಾನು ಸಾಕಿದ್ದ ಮೀನು ಸತ್ತಿದ್ದಕ್ಕೆ ನೇಣಿಗೆ ಶರಣಾದ ಬಾಲಕ

- Advertisement -
- Advertisement -

ಕೇರಳ: ತಾನು ಅಕ್ವೇರಿಯಂನಲ್ಲಿ ಸಾಕಿದ್ದ ಮೀನು ಸತ್ತಿದ್ದಕ್ಕೆ ಬಾಲಕ ನೇಣಿಗೆ ಶರಣಾದ ಘಟನೆ ಕೇರಳದ ಮಲಪ್ಪುರಂನ ಪೊನ್ನಾನಿಯ ಚಂಗರಂಕುಲಂನಲ್ಲಿ ನಡೆದಿದೆ.

ರೋಷನ್ ಮೆನನ್ (13) ಆತ್ಮಹತ್ಯೆಗೆ ಶರಣಾದ ಬಾಲಕ. ತನ್ನ ಮನೆಯ ಅಕ್ವೇರಿಯಂನಲ್ಲಿದ್ದ ಮುದ್ದಿನ ಮೀನು ಅನಿರೀಕ್ಷಿತವಾಗಿ ಸಾವನ್ನಪ್ಪಿದ್ದಕ್ಕೆ ರೋಷನ್ ಮನ ನೊಂದಿದ್ದ.

ರೋಷನ್ ಮೆನನ್ ಶುಕ್ರವಾರ ಬೆಳಿಗ್ಗೆ ತನ್ನ ಮನೆಯ ಪಾರಿವಾಳಗಳಿಗೆ ಆಹಾರ ನೀಡಲು ಮನೆಯ ಟೆರೇಸ್‌ ಮೇಲೆ ಹೋಗಿದ್ದಾನೆ. ಒಂದು ಗಂಟೆ ಕಳೆದರೂ ರೋಷನ್ ಕೆಳಗೆ ಬಾರಲೇ ಇಲ್ಲ. ಹೀಗಾಗಿ, ಟೆರೇಸ್‌ ಮೇಲೆ ಹೋಗಿ ನೋಡಿದಾಗ ಟೆರೇಸ್‌ನಲ್ಲಿ ನಿರ್ಮಿಸಲಾದ ಶೆಡ್‌ನಲ್ಲಿ ರೋಷನ್ ಪ್ಲಾಸ್ಟಿಕ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.ಕೂಡಲೇ ಅವರನ್ನು ಅಕ್ಕಪಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವನು ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

- Advertisement -

Latest News

error: Content is protected !!