Sunday, June 7, 2026
Homeಕರಾವಳಿಮಂಗಳೂರು; ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದಕ್ಕೆ ಬಾಲಕ ಆತ್ಮಹತ್ಯೆ

ಮಂಗಳೂರು; ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದಕ್ಕೆ ಬಾಲಕ ಆತ್ಮಹತ್ಯೆ

- Advertisement -
- Advertisement -

ಮಂಗಳೂರು; ಅತೀಯಾಗಿ ಮೊಬೈಲ್ ಬಳಕೆಗೆ ತಾಯಿ ಬೈದಿದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಕುಲಶೇಖರ ಕೋಟಿಮುರ ಅಪಾರ್ಟ್ ಒಂದಲ್ಲಿ ನಡೆದಿದೆ.

ಜಗದೀಶ್ ಹಾಗೂ ವಿನಯ ದಂಪತಿಗಳ ಮಗನಾದ 14 ವರ್ಷದ ಜ್ಞಾನೇಶ್ ಮೃತ ಬಾಲಕ.. ಅತೀಯಾಗಿ ಮೊಬೈಲ್ ಬಳಕೆಗೆ ತಾಯಿ ಬೈದಿದಕ್ಕೆ ಬೇಸರಗೊಂಡ ಜ್ಞಾನೇಶ್ ತಾನು ಸ್ನಾನ ಮಾಡಿ ಬರುವುದಾಗಿ ಹೇಳಿ ರೂಮಿನೊಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರೂಂಗೆ ಹೋದವನು ಬಾರದಿದ್ದಾಗ ತಂದೆ ಜಗದೀಶ್ ರವರು ಬಾತ್ ರೂಂ ಬಳಿಯಿರುವ ಕಿಟಕಿಯ ಮೂಲಕ ರೂಮಿನೊಳಗೆ ಹೋಗಿ ನೋಡಿದಾಗ ಜ್ಞಾನೇಶ್ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡಿದ್ದ ಸ್ಥೀತಿಯಲ್ಲಿದ್ದನು ಎನ್ನಲಾಗಿದೆ.


ಕೂಡಲೇ ಬಾಗಿಲು ಒಡೆದು ಒಳ ಪ್ರವೇಶಿಸಿ ನೇಣು ಬಿಗಿದ ವೇಲನ್ನು ಕತ್ತರಿಸಿ ಕೆಳಗೆ ಇಳಿಸಿದರೂ ಅದಾಗಲೇ ಜ್ಞಾನೇಶ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಂಕನಾಡಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ

- Advertisement -

Latest News

error: Content is protected !!