Thursday, April 24, 2025
HomeUncategorizedರಿಸರ್ವ್ ಬ್ಯಾಂಕ್‌ಗೆ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ; ರಷ್ಯನ್ ಭಾಷೆಯಲ್ಲಿ ಬಂದ ಬೆದರಿಕೆ ಸಂದೇಶ

ರಿಸರ್ವ್ ಬ್ಯಾಂಕ್‌ಗೆ ದುಷ್ಕರ್ಮಿಗಳಿಂದ ಬಾಂಬ್ ಬೆದರಿಕೆ; ರಷ್ಯನ್ ಭಾಷೆಯಲ್ಲಿ ಬಂದ ಬೆದರಿಕೆ ಸಂದೇಶ

spot_img
- Advertisement -
- Advertisement -

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸುವುದಾಗಿ ದುಷ್ಕರ್ಮಿಗಳಿಂದ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ. ಇದು ಆರ್‌ಬಿಐಗೆ ಒಂದೇ ತಿಂಗಳಲ್ಲಿ ಬಂದಿರುವ ಎರಡನೇಯ ಬೆದರಿಕೆಯಾಗಿದೆ. 

ಈ ಬೆದರಿಕೆ ಸಂದೇಶವು ಡಿ.12 ರಂದು ಆರ್‌ಬಿಐ ಇಮೇಲ್‌ಗೆ ಬಂದಿದ್ದು, ಕುತೂಹಲವೆಂಬಂತೆ ಬೆದರಿಕೆ ಸಂದೇಶವು ರಷ್ಯನ್ ಭಾಷೆಯಲ್ಲಿದೆ ಎನ್ನಲಾಗಿದೆ. 

ಇಮೇಲ್ ಕುರಿತು ಮಾತನಾಡಿರುವ ಮುಂಬೈ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು, ‘ಇಮೇಲ್ ಬೆದರಿಕೆಯು ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಂದಿದ್ದು, ಬೆದರಿಕೆಯ ಸಂದೇಶ ರಷ್ಯನ್ ಭಾಷೆಯಲ್ಲಿದೆ. ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಪ್ರಧಾನ ಕಚೇರಿಯನ್ನು ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ. ಮೇಲ್ ಕಳುಹಿಸಲು ಯಾವ VPN ಅನ್ನು ಬಳಸಲಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಇಮೇಲ್ ಕಳುಹಿಸಿದವರ IP ವಿಳಾಸವನ್ನು ಸಹ ಪತ್ತೆಹಚ್ಚುತ್ತಿದ್ದಾರೆ,’ ಎಂದು ಮೂಲಗಳು ತಿಳಿಸಿವೆ. 

ಘಟನೆಯ ಕುರಿತು ಸದ್ಯ ಮುಂಬೈನ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮೇಲ್ ಕಳುಹಿಸಿದವರ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!