- Advertisement -
![]()
- Advertisement -
ಹೊಸದಿಲ್ಲಿಯ ಕೆಂಪುಕೋಟೆಯ ಮುಂದೆ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ, ಪೊಲೀಸ್ ಮಹಾನಿರ್ದೇಶಕರ ಸೂಚನೆಯ ಮೇರೆಗೆ ಉಡುಪಿ ಜಿಲ್ಲೆಯಲ್ಲಿಯೂ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ಮಾಹಿತಿ ನೀಡಿದ್ದು, ದಿನಂಪ್ರತಿ ತಪಾಸಣೆ ಮಾತ್ರವಲ್ಲದೆ ಆಯ್ದ ಭಾಗದಲ್ಲಿ ಎಚ್ಚರದಿಂದ ಇರುವಂತೆ ಪೊಲೀಸರಿಗೆ ಸೂಚನೆ ಲಭಿಸಿದ್ದು, ಆ ನಿಮಿತ್ತ ನಗರದ ಧಾರ್ಮಿಕ ಕ್ಷೇತ್ರಗಳು ಸಹಿತ ಪ್ರವಾಸಿ ತಾಣಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು ಜಿಲ್ಲೆಯ ಪ್ರಮುಖ ದೇವಸ್ಥಾನ, ಬೀಚ್, ಧಾರ್ಮಿಕ ಕೇಂದ್ರಗಳು ಸಹಿತವಾಗಿ ಜನದಟ್ಟಣೆ ಹೆಚ್ಚಿರುವ, ಪ್ರವಾಸಿಗರು ಹೆಚ್ಚು ಸೇರುವ ಕಡೆಗಳಲ್ಲಿ ವಿಶೇಷ ಭದ್ರತೆ, ನಿಗಾ ವ್ಯವಸ್ಥೆ ಹಾಗೂ ಪರಿಶೀಲನೆ ಇತ್ಯಾದಿ ಹೆಚ್ಚಿಸಲಿದ್ದೇವೆ ಎಂಬ ಮಾಹಿತಿ ನೀಡಿದರು.
- Advertisement -


