Wednesday, June 24, 2026
Homeತಾಜಾ ಸುದ್ದಿಸಮಾಜಮಾದಿ ಪಕ್ಷದ ಮುಖಂಡ ಫಹಾದ್ ಅಹ್ಮದ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ...

ಸಮಾಜಮಾದಿ ಪಕ್ಷದ ಮುಖಂಡ ಫಹಾದ್ ಅಹ್ಮದ್ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಸ್ವರ ಭಾಸ್ಕರ್

- Advertisement -
- Advertisement -

ಮುಂಬೈ: ಬಾಲಿವುಡ್ ನಟಿ, ಸ್ವರಾ ಭಾಸ್ಕರ್ ಸಮಾಜಮಾದಿ ಪಕ್ಷದ ಮುಖಂಡ ಫಹಾದ್ ಅಹ್ಮದ್ ಅವರ ಜೊತೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.


ಇತರ ಬಾಲಿವುಡ್ ನಟಿಯರಂತೆ ಗ್ರ್ಯಾಂಡ್ ಆಗಿ ಮದುವೆಯಾಗದೇ ಕೋರ್ಟ್ ಮ್ಯಾರೆಜ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಜೊತೆ ಹಾರ ಬದಲಿಸಿರುವ ಪೋಟೋ ಒಂದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ತಮ್ಮ ಲವ್ ಸ್ಟೋರಿ ಬಗ್ಗೆ ಹೇಳಿದ್ದಾರೆ. 2019 ರಲ್ಲಿ ಪ್ರತಿಭಟನೆಯ ಸಮಯದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ನಂತರ ಅವರಿಬ್ಬರ ನಡುವೆ ಮಾತುಕತೆ ಹೆಚ್ಚಾಯಿತು,

ಈ ನಡುವೆ ಫಹಾದ್ ತನ್ನ ಸಹೋದರಿಯ ಮದುವೆಗೆ ಸ್ವರಾ ಅವರನ್ನು ಆಹ್ವಾನಿಸಿದ್ದರು, ಆದರೆ ಶೂಟಿಂಗ್‌ನಲ್ಲಿ ನಿರತರಾಗಿದ್ದರಿಂದ, ಸ್ವರಾ ಈ ಮದುವೆಗೆ ಹಾಜರಾಗಲು ಸಾಧ್ಯವಾಗಲಿಲ್ಲ, ನಂತರ ಅವರು ಫಹಾದ್ ಅವರ ಮದುವೆಗೆ ಖಂಡಿತವಾಗಿ ಹಾಜರಾಗುವುದಾಗಿ ಭರವಸೆ ನೀಡಿದ್ದರು ಎಂದು ತಾವು ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!