Sunday, February 16, 2025
Homeಪ್ರಮುಖ-ಸುದ್ದಿಬಾಲಿವುಡ್ ನಟ ಸೈಫ್ ಆಲಿಖಾನ್ ಗೆ ಚೂರಿ ಇರಿತ

ಬಾಲಿವುಡ್ ನಟ ಸೈಫ್ ಆಲಿಖಾನ್ ಗೆ ಚೂರಿ ಇರಿತ

spot_img
- Advertisement -
- Advertisement -

ಮುಂಬೈ; ಬಾಲಿವುಡ್ ನಟ ಸೈಫ್ ಆಲಿಖಾನ್ ಗೆ ಚೂರಿಯಿಂದ ಇರಿಯಲಾಗಿದೆ. ಸೈಫ್ ಆಲಿಖಾನ್ ಅವರ ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸಕ್ಕೆ ಇಂದು ಬೆಳಗ್ಗಿನ ಜಾವ ನುಗ್ಗಿದ ದರೋಡೆಕೋರನೊಬ್ಬ ಸೈಫ್ ಗೆ  ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ ಎನ್ನಲಾಗಿದೆ.  ಗುರುವಾರ ಬೆಳಗಿನ ಜಾವ 2:30 ರ ಸುಮಾರಿಗೆ ನಟ ತಮ್ಮ ಇತರ ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಮಲಗಿದ್ದಾಗ ಘಟನೆ ನಡೆದಿದೆ ಎನ್ನಲಾಗಿದೆ.

 ಸದ್ಯ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ದರೋಡೆಕೋರನೊಂದಿಗಿನ ಗಲಾಟೆಯಲ್ಲಿ ಅವರಿಗೆ ಇರಿತವಾಗಿದೆಯೇ ಅಥವಾ ಗಾಯಗೊಂಡಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮುಂಬೈ ಅಪರಾಧ ವಿಭಾಗವು ಘಟನೆಯ ಬಗ್ಗೆ ಸಮಾನಾಂತರ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಸೈಫ್ ಅವರಿಗೆ ಆರು ಗಾಯಗಳಾಗಿದ್ದು, ಅವುಗಳಲ್ಲಿ ಎರಡು ದೊಡ್ಡ ಗಾಯಗಳಾಗಿವೆ. ಒಂದು ಗಾಯ ಅವರ ಬೆನ್ನುಮೂಳೆಯ ಹತ್ತಿರದಲ್ಲಿದೆ. ನಾವು ಅವರಿಗೆ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದೇವೆ. ನರಶಸ್ತ್ರಚಿಕಿತ್ಸಕ ನಿತಿನ್ ಡಾಂಗೆ, ಕಾಸ್ಮೆಟಿಕ್ ಸರ್ಜನ್ ಲೀನಾ ಜೈನ್ ಮತ್ತು ಅರಿವಳಿಕೆ ತಜ್ಞೆ ನಿಶಾ ಗಾಂಧಿ ಅವರು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!