Thursday, June 4, 2026
Homeತಾಜಾ ಸುದ್ದಿಬೊಲೆರೋ ಕಾರು-ಬೈಕ್ ಪರಸ್ಪರ ಡಿಕ್ಕಿ: ಸ್ಥಳದಲ್ಲೇ ಸಾವನ್ನಪ್ಪಿದ ಮದುಮಗ

ಬೊಲೆರೋ ಕಾರು-ಬೈಕ್ ಪರಸ್ಪರ ಡಿಕ್ಕಿ: ಸ್ಥಳದಲ್ಲೇ ಸಾವನ್ನಪ್ಪಿದ ಮದುಮಗ

- Advertisement -
- Advertisement -

ಹುಬ್ಬಳ್ಳಿ: ಬೊಲೆರೋ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಮದುಮಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಬಳಿಯ ಬೈಪಾಸ್‌ನಲ್ಲಿ ನಡೆದಿದೆ.


ಹುಬ್ಬಳ್ಳಿ ತಾಲೂಕಿನ ಚಳಮಟ್ಟಿ ಗ್ರಾಮದ ನಿವಾಸಿ ಆನಂದ್ ಮಾದರ (27) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮದುಮಗ.
ಆನಂದ್ ಕಳೆದ ಮೇ 20ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅಪಘಾತದಲ್ಲಿ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ. ಈ ಕುರಿತು ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!