Friday, October 4, 2024
Homeಕರಾವಳಿಮಂಗಳೂರುಬಂಟ್ವಾಳ; ಈ ಬಾರಿ ಗಣೇಶೋತ್ಸವ ಶೋಭಾಯಾತ್ರೆಯ ವೇಳೆ ಮುಸ್ಲಿಂ ಬಾಂಧವರು ಪಾನೀಯ ಮತ್ತು ಸಿಹಿ ತಿಂಡಿ...

ಬಂಟ್ವಾಳ; ಈ ಬಾರಿ ಗಣೇಶೋತ್ಸವ ಶೋಭಾಯಾತ್ರೆಯ ವೇಳೆ ಮುಸ್ಲಿಂ ಬಾಂಧವರು ಪಾನೀಯ ಮತ್ತು ಸಿಹಿ ತಿಂಡಿ ಹಂಚಬೇಡಿ; ಬೋಳಂತೂರಿನ ಶ್ರೀ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿ ಬರೆದ ಪತ್ರಕ್ಕೆ ಭಾರೀ ಆಕ್ರೋಶ; ಹೀಗೆ ಮಾಡಿದರೆ ಸೌಹಾರ್ದತೆ ಮೂಡೋದು ಹೇಗೆ ಎಂದು ನೆಟ್ಟಿಗರು ಪ್ರಶ್ನೆ

spot_img
- Advertisement -
- Advertisement -

 ಬಂಟ್ವಾಳ ತಾಲೂಕಿನ ಬೋಳಂತೂರಿನ ಶ್ರೀ ಸಿದ್ಧಿ ವಿನಾಯಕ ವಿಶ್ವಸ್ಥ ಮಂಡಳಿ ಬೋಳಂತೂರಿನ ಮಸೀದಿಯ ಆಡಳಿತ ಸಮಿತಿಗೆ ಬರೆದಿರುವ ಪತ್ರವೊಂದು  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಅಲ್ಲದೇ ಪತ್ರಕ್ಕೆ ನೆಟಿಜನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ವರ್ಷದ ಸಾರ್ವಜನಿಕ ಶ್ರೀ ಗಣಿಶೋತ್ಸವದ ಮೆರವಣಿಗೆ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗೃತೆಗಾಗಿ ತಮ್ಮಲ್ಲಿ ಮನವಿ ಮಡುವುದೇನೆಂದರೆ ಇನ್ನು ಮುಂದಕ್ಕೆ ಶೋಭಾಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಈ ಮೂಲಕ ವಿನಂತಿಸುತ್ತೇವೆ. ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಈ ಮೂಲಕ ಮನವಿ ಮಾಡುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸದ್ಯ ಈ ಪತ್ರ ವೈರಲ್ ಆಗಿದ್ದು ಹಿಂದೂ ಮುಸ್ಲಿಂರು ಸಾಮರಸ್ಯದಿಂದ ಬದುಕಬೇಕಾದರೆ ಇಂತಹ ವಾತಾವರಣದ ಅವಶ್ಯಕತೆ ಇದೆ. ಹೀಗಿರುವಾಗ ಅಲ್ಲೋ ಇಲ್ಲೋ ನಡುವೆಯ ಇಂತಹ ಸೌಹಾರ್ದಯುತ ಘಟನೆಗಳಿಗೆ ತಡೆಯೊಡ್ಡಿದರೆ ಸೌಹಾರ್ದಯುತ ಭಾರತ ನಿರ್ಮಾಣವಾಗೋದಾದರೆ ಹೇಗೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!