Thursday, June 4, 2026
Homeಕರಾವಳಿಉಡುಪಿಉಡುಪಿ: ಕೋಚಿಂಗ್ ಸೆಂಟರ್ ಗೆ ತೆರಳಿದ್ದ ಬಾಲಕ ನಾಪತ್ತೆ; ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪೋಷಕರ ಮನವಿ

ಉಡುಪಿ: ಕೋಚಿಂಗ್ ಸೆಂಟರ್ ಗೆ ತೆರಳಿದ್ದ ಬಾಲಕ ನಾಪತ್ತೆ; ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪೋಷಕರ ಮನವಿ

- Advertisement -
- Advertisement -

ಉಡುಪಿ: ಕೋಚಿಂಗ್ ಸೆಂಟರ್ ಗೆ ತೆರಳಿದ್ದ ಬಾಲಕನೋರ್ವ ನಾಪತ್ತೆಯಾಗಿದ್ದು, ಪತ್ತೆಯಾದಲ್ಲಿ ಮಾಹಿತಿ ನೀಡುವಂತೆ ಪೋಷಕರು ಮನವಿ ಮಾಡಿದ್ದಾರೆ.

ಬ್ರಹ್ಮಾವರದ ಬಾರ್ಕೂರು ರೋಡ್ ಹಂದಾಡಿಯ ನಿವಾಸಿ ಪ್ರಕಾಶ್ ಎಂಬವರ ಪುತ್ರ ಆರ್ಯ (13) ಭಾನುವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾನೆ.

ಭಾನುವಾರ ಬೆಳಗ್ಗೆ ಉಡುಪಿಯ ಕಡಿಯಾಳಿಯಲ್ಲಿರುವ ಆಕಾಶ್ ಇನ್ ಸ್ಟಿಟ್ಯೂಟ್ ಗೆ ತೆರಳಿದ್ದ ಆರ್ಯ ಮನೆಗೆ ವಾಪಸ್ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಬಾಲಕ ಆರ್ಯ ಪತ್ತೆಯಾದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ (0820-2520444) ಮಾಹಿತಿ ನೀಡುವಂತೆ ಅಥವಾ 94810249622 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಪೋಷಕರು ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!