Sunday, May 5, 2024
Homeಕರಾವಳಿಉಡುಪಿಕರಾವಳಿ ಮಂದಿಗೆ ಇಲ್ಲಿದೆ ಸಿಹಿ ಸುದ್ದಿ; ಜನವರಿ 1ರಿಂದ ಸಿಗಲಿದೆ ಬಿಪಿಎಲ್ ಕಾರ್ಡ್​ದಾರರಿಗೆ ಕುಚಲಕ್ಕಿ

ಕರಾವಳಿ ಮಂದಿಗೆ ಇಲ್ಲಿದೆ ಸಿಹಿ ಸುದ್ದಿ; ಜನವರಿ 1ರಿಂದ ಸಿಗಲಿದೆ ಬಿಪಿಎಲ್ ಕಾರ್ಡ್​ದಾರರಿಗೆ ಕುಚಲಕ್ಕಿ

spot_img
- Advertisement -
- Advertisement -

ಬೆಂಗಳೂರು; ಕರಾವಳಿ ಮಂದಿಗೆ ಸಿಹಿ ಸುದ್ದಿ ಇಲ್ಲಿದೆ. ಜನವರಿ 1 ರಿಂದ ಕರಾವಳಿಯ ಮೂರು ಜಿಲ್ಲೆಗಳಿಗೆ ಕುಚ್ಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಾಲ್​​ ಕುಚಲಕ್ಕಿ ಅವಶ್ಯಕತೆ ಇದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇದಕ್ಕಾಗಿ ವಿಶೇಷ ಕುಚಲಕ್ಕಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಡಿ 1ರಿಂದ ಕುಚಲಕ್ಕಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದಿದ್ದಾರೆ.

ಪ್ರತಿ ಕ್ವಿಂಅಲ್​ ಕುಚಲಕ್ಕಿಗೆ ₹ 2,540 ನೀಡಲಾಗುವುದು. ಪಡಿತರದಲ್ಲಿ ಕುಚಲಕ್ಕಿ ವಿತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. ಈ ಮೂರೂ ಜಿಲ್ಲೆಗಳಿಗೆ ಅಕ್ಕಿ ವಿತರಿಸಲು ತಿಂಗಳಿಗೆ 1 ಲಕ್ಷ ಕ್ವಿಂಟಲ್ ಅಕ್ಕಿ ಬೇಕಿದೆ. ಇದಕ್ಕಾಗಿ 18 ಲಕ್ಷ ಕ್ವಿಂಟಲ್ ಭತ್ತ ಸಂಸ್ಕರಿಸಬೇಕಾಗಿದೆ. ಇದನ್ನು ಬೇರೆಡೆಯಿಂದ ಕೊಳ್ಳುವ ಬದಲು ಕರಾವಳಿ ಜಿಲ್ಲೆಗಳಲ್ಲಿಯೇ ಖರೀದಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!