- Advertisement -
![]()
- Advertisement -
ಬೆಳ್ತಂಗಡಿ: ಪಾಳು ಬಾವಿಯಲ್ಲಿ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆಯಾಗಿರುವ ಘಟನೆ ವಾಮದಪದವಿನಲ್ಲಿ ನಡೆದಿದೆ. ಇಲ್ಲಿನ ಜನವಸತಿ ಇಲ್ಲದ ಜಾಗದ ಪಾಳು ಬಾವಿಯಲ್ಲಿ ಡಿ. 3ರಂದು ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಮಂಗಳೂರು ತಾಲೂಕಿನ ಉಳ್ಳಾಲ ಕಾಪಿಕಾಡ್ ನಿವಾಸಿ ಮನ್ವಿತ್ ಅವರು ತನ್ನ ತಂದೆಯ ಈ ಖಾಲಿ ನಿವೇಶನದ ಅಳತೆ ಮಾಡುವ ಉದ್ದೇಶದಿಂದ ಕಾರ್ಮಿಕರ ಮೂಲಕ ಪೊದೆ, ಹುಲ್ಲನ್ನು ಸ್ವಚ್ಛಗೊಳಿಸುತ್ತಿದ್ದಾಗ ಬಾವಿಯ ಒಳಗೆ ಮೃತದೇಹ ಕಂಡು ಬಂದಿದೆ. ಅಪರಿಚಿತ ವ್ಯಕ್ತಿಯು ಸುಮಾರು 50-60 ವರ್ಷ ಪ್ರಾಯದವನಾಗಿದ್ದು, ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.
- Advertisement -


