Thursday, June 4, 2026
Homeಕರಾವಳಿಮಂಗಳೂರು; ದೋಣಿ ಮಗುಚಿಬಿದ್ದು ವ್ಯಕ್ತಿ ಸಾವು

ಮಂಗಳೂರು; ದೋಣಿ ಮಗುಚಿಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು: ದೋಣಿ ಮಗುಚಿದ್ದ ಕಾರಣ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹರೇಕಳ-ಅಡ್ಯಾರ್ ಅಣೆಕಟ್ಟು ಬಳಿ ಸಂಭವಿಸಿದೆ.ಅಡ್ಯಾರ್ ಕಟ್ಟೆ ನಿವಾಸಿಯಾಗಿರುವ ರಾಬರ್ಟ್ (70) ಎಂಬವರು ಮೃತ ವ್ಯಕ್ತಿ.

ದೋಣಿ ಮಗುಚಿದಾಗ ದೋಣಿಯಲ್ಲಿದ್ದ ರಾಬರ್ಟ್ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದಾರೆ. ತಕ್ಷಣ ಗಮನಿಸಿದ ಸ್ಥಳೀಯರು ರಾಬರ್ಟ್ ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ರಾಬರ್ಟ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!