Sunday, November 29, 2020
Home ತಾಜಾ ಸುದ್ದಿ ಕ್ಷುಲ್ಲಕ ಕಾರಣಕ್ಕೆ ರಕ್ತಪಾತ- ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮನನ್ನು ಇರಿದು ಕೊಂದ ಅಣ್ಣ

ಕ್ಷುಲ್ಲಕ ಕಾರಣಕ್ಕೆ ರಕ್ತಪಾತ- ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ತಮ್ಮನನ್ನು ಇರಿದು ಕೊಂದ ಅಣ್ಣ

- Advertisement -
- Advertisement -

ರಾಜಸ್ಥಾನ:ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುವ ರಕ್ತಪಾತಗಳು ಹೆಚ್ಚಾಗುತ್ತಲೇ ಇವೆ.ಇಂತಹುದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಮೊಬೈಲ್​ ಡೇಟಾ ಖಾಲಿ ಮಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಕಿರಿಯ ಸಹೋದರನನ್ನ ಇರಿದು ಕೊಲೆ ಮಾಡಿದ್ದಾನೆ.


ತಮ್ಮ ರಾಯ್ ಮೊಬೈಲ್​ ಡೇಟಾ ಖಾಲಿ ಮಾಡಿದ ಕಾರಣಕ್ಕೆ ಆತನನ್ನು ಮನೆಯ ಛಾವಣಿಗೆ ಕರೆದೊಯ್ದ ರಾಮನ್​ ಆತನ ಮೇಲೆ ಹರಿಹಾಯ್ದಿದ್ದಾನೆ. ಅಲ್ಲದೇ ಆತನ ಎದೆಗೆ ನಾಲ್ಕೈದು ಬಾರಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿ ರಾಮನ್​ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ.


ಘಟನೆಯ ನಂತರ ಮನೆಯ ಛಾವಣಿ ಮೇಲೆ ರಕ್ತಸ್ರಾವ ನೋಡಿದ ಕುಟುಂಬಸ್ಥರು ವಿಷಯ ತಿಳಿದು ಸಹೋದರನನ್ನ ಆಸ್ಪತ್ರೆಗೆ ದಾಖಲಿಸಿದರಾದರೂ ಆತ ತೀವ್ರ ರಕ್ತಸ್ರಾವ ದಿಂದ ಬದುಕುಳಿಯಲಿಲ್ಲ.ಆರೋಪಿ ರಾಮ್​ನನ್ನ ಪೊಲೀಸರು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -
- Advertisment -

Latest News

ನಾಳೆ ಈ ದಶಕದ ಕೊನೆಯ ಚಂದ್ರಗ್ರಹಣ!…

ಬೆಂಗಳೂರು:ನಾಳೆ ಕಾರ್ತಿಕ ಪೂರ್ಣಿಮೆಯ ದಿನ ಈ ದಶಕದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಗ್ರಹಣವು ಮಧ್ಯಾಹ್ನ 1:04 ಗಂಟೆಯಿಂದ ಸಂಜೆ 5:22 ಗಂಟೆಯವರೆಗೂ ಗೋಚರಿಸಲಿದೆ.ತುಸು ಹೆಚ್ಚಿನ ಅವಧಿಗೆ ಗ್ರಹಣ ಸಂಭವಿಸಿದರೂ ಸೂರ್ಯಾಸ್ತಕ್ಕೂ ಮುನ್ನ ಚಂದ್ರ...

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ!..ಅಪ್ರಚೋದಿತ ಗುಂಡಿನ ದಾಳಿ

ಜಮ್ಮು:ಕಳೆದ ಕೆಲವು ದಿನಗಳಿಂದ ಜಮ್ಮುವಿನ ಗಡಿಯಲ್ಲಿ ಪಾಕ್ ಅಟ್ಟಹಾಸ ಮುಗಿಲು ಮುಟ್ಟಿದೆ. ಇಂದು ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ, ಅಂತರರಾಷ್ಟ್ರೀಯ ಗಡಿ ಬಳಿಯ ಮುಂಚೂಣಿ ಠಾಣೆಗಳು ಹಾಗೂ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ...

ಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಹೊಸತೊಂದು ಕಥೆ ಹೆಣೆದ ಚೀನಾ- ಕೊರೊನಾ ವೈರಸ್ ಹುಟ್ಟಿದ್ದು ಭಾರತದಲ್ಲಿ ಎಂದ ವಿಜ್ಞಾನಿಗಳು!…

ಬೀಜಿಂಗ್:ಕಳೆದ ಹಲವು ತಿಂಗಳಿಂದ ಇಡೀ ವಿಶ್ವವನ್ನೇ ನಡುಗಿಸಿರುವ ಮಾರಕ ಕೊರೊನಾ ವೈರಸ್ ಹುಟ್ಟಿನಬಗ್ಗೆ ಚೀನಾ ಹೊಸತೊಂದು ಕಥೆ ಹೆಣೆದಿದೆ. ಕೊರೊನಾ ಜಗತ್ತಿಗೆ ಹರಡಲು ಚೀನಾ ಕಾರಣ ಎಂಬುದು ಇಡೀ ಜಗತ್ತಿಗೆ ತಿಳಿದಿದ್ದರೂ ಚೀನಾ...

ಕಾರು ಕಳುವಾಗಿದೆ ಎಂದು ಸುಳ್ಳು ದೂರು ಕೊಟ್ಟವನು ಅಂದರ್ ಆಗಿದ್ದು ಹೇಗೆ ಗೊತ್ತಾ?

ತುಮಕೂರು: ಲೋನ್ ಕಟ್ಟಲಾಗದೆ ಕಾರು ಕಳುವಾಗಿದೆ ಎಂದು ಸುಳ್ಳು ದೂರು ನೀಡಿದ್ದ ಮಾಲೀಕನೇ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಅಪರಿಚಿತರು ಯಾರೋ ಇನೋವಾ ಕಾರನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ...

error: Content is protected !!