Sunday, May 5, 2024
Homeತಾಜಾ ಸುದ್ದಿಬೆಳ್ತಂಗಡಿ: ಮತ್ತೆ ಸುರಿದ ರಕ್ತ ಮಳೆ: ಪ್ರಾಕೃತಿಕ ವಿಸ್ಮಯ ಕಂಡು ಜನ ಗಾಬರಿ

ಬೆಳ್ತಂಗಡಿ: ಮತ್ತೆ ಸುರಿದ ರಕ್ತ ಮಳೆ: ಪ್ರಾಕೃತಿಕ ವಿಸ್ಮಯ ಕಂಡು ಜನ ಗಾಬರಿ

spot_img
- Advertisement -
- Advertisement -

ಬೆಳ್ತಂಗಡಿ: ಸುರಿಯುತ್ತಿರುವ ಮಳೆ ಇಡೀ ರಾಜ್ಯವನ್ನೇ ಅಲ್ಲೋಲ್ಲ ಕಲ್ಲೋಲವಾಗಿಸಿದೆ. ಮಳೆರಾಯನ ಆರ್ಭಟಕ್ಕೆ ನೆರೆ ಬಂದು, ಕೊಳ್ಳಗಳು ತುಂಬಿ ಅದೆಷ್ಟೋ ಮಂದಿಯ ಬದುಕು ತತ್ತರ ಆಗಿದೆ. ಆದರೆ, ಇದೆಲ್ಲದರ ನಡುವೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಲ್ಲೂ ವೈವಿಧ್ಯತೆ ಮೂಡಿ ನಿಂತಿದೆ. ಅಲ್ಲಿ ಬಣ್ಣದ ಮಳೆ ಸುರಿದಿದೆ. ಇದು ಈ ವರ್ಷ ಬೆಳ್ತಂಗಡಿಯಲ್ಲಿ ಕಂಡ ಎರಡನೇ ಪ್ರಕರಣ. ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ರಕ್ತ ವರ್ಷ ಸುರಿದಿತ್ತು.

ಇಲ್ಲೇ, ಕಲ್ಮಂಜ ಗ್ರಾಮದಲ್ಲಿ ಓರ್ವರ ಮನೆಯ ಪರಿಸರದಲ್ಲಿ ಇಂದು ಬೆಳಿಗ್ಗೆ ಕೆಂಪು ಮಳೆ ಸುರಿದಿರುವ ಘಟನೆ ನಡೆದಿದೆ. ಕಲ್ಮಂಜ ಗ್ರಾಮದ ಪಂಚಾಯತ್ ವ್ಯಾಪ್ತಿಯ ನಿಡಿಗಲ್ ಶಾನು ಬೋಗ್ ನಿವಾಸಿ ದಿವಾಕರ ಗೌಡ ಎಂಬುವವರ ಮನೆಯ ಪರಿಸರದಲ್ಲಿ ಈ ವೈಚಿತ್ರ್ಯ ನಡೆದಿದೆ. ಕೆಂಪು ಮಳೆ ಸುರಿದು, ಈ ಪ್ರದೇಶದ ಜನರನ್ನು ವಿಸ್ಮಯಗೊಳಿಸಿದೆ. ಕೆಂಪು ನೀರು ನೋಡಿ ಮಕ್ಕಳಿಗೆ ಖುಷಿಯಾದ್ರೆ ಹಿರಿಯರಿಗೆ ಈ ಪ್ರಾಕೃತಿಕ ವಿಸ್ಮಯ ನೋಡಿ ಗಾಬರಿಗೊಂಡಿದ್ದಾರೆ.

- Advertisement -
spot_img

Latest News

error: Content is protected !!