Sunday, May 5, 2024
Homeತಾಜಾ ಸುದ್ದಿಬಂಟ್ವಾಳ; ಕಾಂಗ್ರೆಸ್ ಅಧಿಕಾರವಿಲ್ಲದೆ ನೀರಿನಿಂದ ಮೇಲಕ್ಕೆ ಎತ್ತಿ ಹಾಕಿದ ಮೀನಿನಂತೆ ಒದ್ದಾಡುವ ಸ್ಥಿತಿಯಲ್ಲಿದೆ; ಶಾಸಕ ರಾಜೇಶ್...

ಬಂಟ್ವಾಳ; ಕಾಂಗ್ರೆಸ್ ಅಧಿಕಾರವಿಲ್ಲದೆ ನೀರಿನಿಂದ ಮೇಲಕ್ಕೆ ಎತ್ತಿ ಹಾಕಿದ ಮೀನಿನಂತೆ ಒದ್ದಾಡುವ ಸ್ಥಿತಿಯಲ್ಲಿದೆ; ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

spot_img
- Advertisement -
- Advertisement -

ಬಂಟ್ವಾಳ; ಧರ್ಮ ,ಸಂಸ್ಕೃತಿಗಳ ಉಳಿಯುವಿಕೆಗಾಗಿ ಹೋರಾಟ ಮಾಡಿದ್ದೇನೆ ಹೊರತು ಅಧಿಕಾರಕ್ಕಾಗಿ ಅಲ್ಲ, ಅಭಿವೃದ್ಧಿ ಒಂದು ಭಾಗವಾಗಿದೆ, ಅದನ್ನು ಕರ್ತವ್ಯ ಎಂಬ ದೃಷ್ಟಿಯಿಂದ ಮಾಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಿಳಿಸಿದರು

ಪಿಲಿಮೊಗರು ಶಕ್ತಿ ಕೇಂದ್ರದ ಕೊಪ್ಪಳ ಸೀತಾರಾಮ ಪೂಜಾರಿ ಅವರ ಮನೆಯಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.  ಕಾಂಗ್ರೆಸ್ ಅಧಿಕಾರವಿಲ್ಲದೆ ನೀರಿನಿಂದ ಮೇಲಕ್ಕೆ ಎತ್ತಿ ಹಾಕಿದ ಮೀನಿನಂತೆ ಒದ್ದಾಡುವ ಸ್ಥಿತಿ ಬಂದೋದಗಿದ್ದು, ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಸುಳ್ಳು, ಅಪಪ್ರಚಾರಗಳ ಮೂಲಕ ತೊಡಗಿಸಿಕೊಂಡಿದೆ.ಹಾಗಾಗಿ ಕಾರ್ಯಕರ್ತರು ಗೊಂದಲಕ್ಕೆ ಎಡೆಮಾಡಿಕೊಡದೆ ಡಬ್ಬಲ್ ಇಂಜಿನ್ ಸರಕಾರ ಆಡಳಿತಕ್ಕಾಗಿ ಬಿಜೆಪಿಗೆ ಅವಕಾಶ ನೀಡಿ ಎಂದು ಅವರು ಮನವಿ ಮಾಡಿದರು.

ಕ್ಷೇತ್ರದಲ್ಲಿ ಸಾವಿರಾರು ಜನರ ಪ್ರೀತಿ ವಿಶ್ವಾಸ ನೀಡಿ ಗೌರವ ನೀಡಿದ್ದಾರೆ.  ಕ್ಷೇತ್ರದ ಜನರು ನೀಡಿದ ಮತಕ್ಕೆ, ಕ್ಷೇತ್ರದ ಜನರ ಸೇವೆ ದೇವರ ಕೆಲಸ ಎಂಬ ರೀತಿಯಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಸಹಿತ ಜನರ ಪ್ರತಿಯೊಂದು ಕಷ್ಟಸುಖಗಳ ಜೊತೆಯಾಗಿ ನಿಂತು ನೈತಿಕ ಬೆಂಬಲ ನೀಡಿದ್ದೇನೆ ಎಂದು ಅವರು ತಿಳಿಸಿದರು. ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸುವ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಂದಿರುವ ಅನುದಾನಗಳ ಹಂಚುವಿಕೆಯ ಜವಬ್ದಾರಿಯನ್ನು ಕ್ಷೇತ್ರಕ್ಕೆ ವಹಿಸಿದ್ದೆ. ಪಕ್ಷ ಗಟ್ಟಿಯಾದರೆ ಮಾತ್ರ ಕಾರ್ಯಕರ್ತ ಶಕ್ತಿವಂತನಾಗಿ ಬೆಳೆಯುವ ಅವಕಾಶ ಸಿಗುತ್ತದೆ ಎಂದು ಅವರು ತಿಳಿಸಿದರು.

ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ ಮಾತನಾಡಿ,ಐದು ವರ್ಷ ಯಶಸ್ವಿಯಾಗಿ ಪೂರ್ತಿ ಮಾಡಿದ ಅಭಿವೃದ್ಧಿಯ ಹೆಗ್ಗಳಿಕೆಗೆ ಪಾತ್ರವಾಗಿರುವ ಬಂಟ್ವಾಳದ ಪ್ರಥಮ ಶಾಸಕ ರಾಜೇಶ್ ನಾಯ್ಕ್ ಅವರು ಎಂದು ಸಂತಸ ವ್ಯಕ್ತಪಡಿಸಿದರು.  ಸರ್ವರಿಗೂ ಸರಕಾರದ ಅನುದಾನಗಳ ಜೊತೆಯಲ್ಲಿ ವೈಯಕ್ತಿಕ ಸಹಾಯವನ್ನು ನೀಡಿದ ಏಕೈಕ ಶಾಸಕ ರಾಜೇಶ್ ನಾಯ್ಕ್ ಮತ್ತೊಮ್ಮೆ ಬಂಟ್ವಾಳ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗಲು ಒಂದಾಗಿ ದುಡಿಯಬೇಕಾಗಿದೆ ಎಂದು ಅವರು ತಿಳಿಸಿದರು.

 ಬಂಟ್ವಾಳದಲ್ಲಿ ಮುಂದೆಯೂ ಶಾಂತಿ ,ನೆಮ್ಮದಿಯ ವಾತಾವರಣ ಶಾಶ್ವತವಾಗಿ ಇರುವಂತೆ ಮಾಡಲು ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಮತ್ತೊಮ್ಮೆ ಬಹುಮುಖ್ಯವಾಗಿ ಆಯ್ಕೆಯಾಗಬೇಕು ಎಂದು ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಮಾತನಾಡಿ, ನಾವು ನೀಡಿದ ಮತಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ರಾಜ್ಯದಲ್ಲಿಯೇ ಉತ್ತಮ ಶಾಸಕ ಎಂಬ ಹೆಸರಿಗೆ ಪಾತ್ರವಾದ ರೀತಿಯ ಅಭಿವೃದ್ಧಿ ಮಾಡಿದ್ದಾರೆ.

 ಪ್ರಾಮಾಣಿಕ ರಾಜಕಾರಣಿ, ಬಂಟ್ವಾಳ ಕ್ಷೇತ್ರದ ಗೌರವವನ್ನು ಹೆಚ್ಚಿಸಿದ, ಓರ್ವ ಛಲವಾದಿ, ಸೌಮ್ಯ ಸ್ವಭಾವದ ಧಾರ್ಮಿಕ ಸಾಮಾಜಿಕ , ರಾಷ್ಟ್ರೀಯ ಚಿಂತಕ ರಾಜೇಶ್ ನಾಯ್ಕ್ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಬೇಕು. ತುಷ್ಟೀಕರಣ ಮಾಡದೆ ಸರ್ವರಿಗೂ ನ್ಯಾಯ ನೀಡಿದ ಬಿಜೆಪಿ ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕು,ಇದಕ್ಕೆ ಪೂರಕವಾಗಿ ರಾಜ್ಯಕ್ಕೆ ಬಲನೀಡಬೇಕಾದರೆ ಬಂಟ್ವಾಳದಲ್ಲಿಯೂ ಬಿಜೆಪಿ ಶಾಸಕರು ಆಯ್ಕೆಯಾಗಬೇಕಾಗಿದೆ ಎಂದು ಅವರು ತಿಳಿಸಿದ್ದಲ್ಲದೆ, ಮುಂದಿನ ಒಂದು ತಿಂಗಳ ಕಾಲ ಬಿಜೆಪಿ ಶಾಸಕರ ಆಯ್ಕೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ನಿದ್ದೆ ಬಿಟ್ಟು ಕೆಲಸ ಮಾಡಿ ಎಂದು ಮನವಿ ಮಾಡಿದರು.

   ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ ಮಾತನಾಡಿ, ರಾಜೇಶ್ ನಾಯ್ಕ್ ಶಾಸಕರಾಗಿ ಅವರ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ಕಳೆದ ಐದು ವರ್ಷಗಳಲ್ಲಿ ಮಾಡಿತೋರಿಸಿದ್ದಾರೆ.  ಆದರೆ ಕ್ಷೇತ್ರದಲ್ಲಿ ಕಾರ್ಯಕರ್ತರು ಅವರ ಸೇವೆಯನ್ನು ಮನೆಮನೆಗೆ ಹೋಗಿ ತಿಳಿಸುವ ಮತ್ತು ನೆನಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಬೇಕಾಗಿದೆ.

  ವಿರೋಧ ಪಕ್ಷದ ಕಾರ್ಯಕರ್ತರು ಕೂಡ ಇವರ ಅಭಿವೃದ್ಧಿ ಕಾರ್ಯ, ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.ವೇದಿಕೆಯಲ್ಲಿ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ವಾಮದಪದವು,  ಜಿಲ್ಲಾ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪಿಲಿಮೊಗರು ಗ್ರಾಮಪಂಚಾಯತ್ ಸದಸ್ಯರಾದ ವಿನೋದ್ ಸಾಲಿಯಾನ್, ಕುಸುಮರಮೇಶ್, ಸುನಂದಾಸುರೇಂದ್ರ,ಬೂತ್ ಅಧ್ಯಕ್ಷ ಜಯರಾಮ್ ಕೊಪ್ಪಳ, ಕಾರ್ಯದರ್ಶಿ ಪ್ರಣೀತ್ ಬಾರಕಿನೆಡೆ,ವೆಂಕಟೇಶ್ ಭಟ್, ಕಮಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!