Wednesday, May 15, 2024
Homeತಾಜಾ ಸುದ್ದಿಮೇಕೆದಾಟು ಯಾತ್ರೆ ಸುಳ್ಳಿನಜಾತ್ರೆ ಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ- ಮೇಕೆದಾಟು - ಎಣ್ಣೆ...

ಮೇಕೆದಾಟು ಯಾತ್ರೆ ಸುಳ್ಳಿನಜಾತ್ರೆ ಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ- ಮೇಕೆದಾಟು – ಎಣ್ಣೆ ಘಾಟು : ಬಿಜೆಪಿ ಟೀಕೆ

spot_img
- Advertisement -
- Advertisement -

ಬೆಂಗಳೂರು: ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ನಡೆಸುತ್ತಿರುವ ಎರಡನೇ ಹಂತದ ಪಾದಯಾತ್ರೆಯಲ್ಲಿ ರಾಜಕೀಯ ಪುಡಾರಿಗಳ ದರ್ಬಾರು ಜೋರಾಗಿದ್ದು, “ಮೇಕೆದಾಟು – ಎಣ್ಣೆ ಘಾಟು” ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ” ಅಡಿಗಡಿಗೊಂದು ತಂಪಾದ ಜ್ಯೂಸ್, ಐಸ್ ಕ್ರೀಮ್, ಎಳನೀರು, ಹಣ್ಣುಗಳು, ಬಾದಾಮಿ ಹಾಲು, ಮಜ್ಜಿಗೆ, ಇದು ಜಾತ್ರೆಯಲ್ಲ, ಇದು ಮೇಕೆದಾಟು ಪಾದಯಾತ್ರೆ! , ಸುಳ್ಳಿನಜಾತ್ರೆ ಗೆ ಬಂದವರಿಗೆಲ್ಲ ಹಣದ ಆಮಿಷ, ಇದು ಬಂಡೆ ‍& ಮಂಡೆ ಒಡೆದ ಹಣವಲ್ಲದೆ ಮತ್ತೇನು? ವಿಶೇಷವಾಗಿ, ಮೇಕೆದಾಟು – ಎಣ್ಣೆ ಘಾಟು” ಎಂದು ಆರೋಪಿಸಿದೆ.

“ಮೇಕೆದಾಟು ಯಾತ್ರೆ ಸುಳ್ಳಿನಜಾತ್ರೆ ಯಾಗಿ ಬದಲಾಗಿ ಈಗ ವೈಯುಕ್ತಿಕ ಪ್ರತಿಷ್ಠೆಯ ಕಣವಾಗುತ್ತಿದೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಬಣಗಳು ಜಾಗ ಇದ್ದಲ್ಲೆಲ್ಲ ಫ್ಲೆಕ್ಸ್, ಬ್ಯಾನರ್‌, ಕಟೌಟು, ಮೂಲಕ ತಮ್ಮ ತಮ್ಮ ನಾಯಕರ ಗುಣಗಾನ ಮಾಡುತ್ತಿವೆ. ಹೆಸರಿಗಷ್ಟೇ ನೀರು, ಇಲ್ಲಿ ಬರೀ ರಾಜಕೀಯ ಪುಡಾರಿಗಳ ದರ್ಬಾರು “ಎಂದು ವ್ಯಂಗ್ಯವಾಡಿದೆ.

“ಮೂರು ದಿನಗಳ ಕಾಲ ಬೆಂಗಳೂರು ನಗರವಾಸಿಗಳು ಟ್ರಾಫಿಕ್‌ ಜಾಮ್‌ ಸಹಿಸಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್‌ಟ್ರಾಫಿಕ್‌ ಬಾಂಬ್‌ ಎಸೆದಿದ್ದಾರೆ.1 ನಿಮಿಷ ಸಂಚಾರ ಅಸ್ತವ್ಯಸ್ತಗೊಂಡರೆ ಗಂಟೆಗಟ್ಟಲೆ ಬವಣೆಪಡಬೇಕಾದ ಈ ಸಮಯದಲ್ಲಿ 3 ದಿನ ತಡೆದುಕೊಳ್ಳುವುದು ಸುಲಭದ ಮಾತೇ? ಟ್ರಾಫಿಕ್‌ ಅನಾಹುತದ ಅರಿವಿದೆಯೇ? ಮಾನ್ಯ ಡಿಕೆಶಿಯವರೇ, 6 ದಶಕಗಳ ಕಾಲ ಕಾಂಗ್ರೆಸ್‌ ಪಕ್ಷವನ್ನು ಸಹಿಸಿಕೊಂಡಿದ್ದಕ್ಕೆ, ದೇಶ ಇನ್ನೂ ತೊಂದರೆ ಅನುಭವಿಸುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕೆ ಬೆಂಗಳೂರಿನ ಜನತೆಯನ್ನು ಕಷ್ಟಕ್ಕೆ ದೂಡಿ, ಮೂರು ದಿನ ತಡೆದುಕೊಳ್ಳಿ ಎಂದು ಬಿಟ್ಟಿ ಸಲಹೆ ನೀಡುತ್ತಿದ್ದೀರಿ. ಜನತೆ ನಿಮ್ಮನ್ನು ಕ್ಷಮಿಸುವರೇ?” ಎಂದು ಬಿಜೆಪಿ ಪ್ರಶ್ನಿಸಿದೆ.

- Advertisement -
spot_img

Latest News

error: Content is protected !!