Thursday, June 4, 2026
Homeತಾಜಾ ಸುದ್ದಿಕಾಂಗ್ರೆಸ್ಸಿಗರಿಗೆ ಬೇಕಿರುವುದು ನೈಜ ವಿಚಾರವಲ್ಲ, ಪ್ರಚಾರ: ಬಿಜೆಪಿ ಟೀಕೆ

ಕಾಂಗ್ರೆಸ್ಸಿಗರಿಗೆ ಬೇಕಿರುವುದು ನೈಜ ವಿಚಾರವಲ್ಲ, ಪ್ರಚಾರ: ಬಿಜೆಪಿ ಟೀಕೆ

- Advertisement -
- Advertisement -

ಬೆಂಗಳೂರು: ಮೇಕೆದಾಟು ರೀತಿ ರಾಜ್ಯದ ಇತರ ಭಾಗಗಳಲ್ಲೂ ಪಾದಯಾತ್ರೆ ನಡೆಸುವುದಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದ್ದು ಇದು ದೆಹಲಿಯ ನಕಲಿ ಗಾಂಧಿಗಳನ್ನು ಮೆಚ್ಚಿಸುವ ತಂತ್ರ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ನ ವಿರುದ್ದ ಬಿಜೆಪಿ ರಾಜ್ಯ ಘಟಕವು ಸರಣಿ ಟ್ವೀಟ್ ಮಾಡಿ ಟೀಕಿಸಿದ್ದು , “ಮಹದಾಯಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು? ಮಹದಾಯಿ ವಿಚಾರದಲ್ಲಿ ಹೋರಾಟ ನಡೆಸಿದ ರೈತರ ಮೇಲೆ ಸಿದ್ದರಾಮಯ್ಯ ಸರ್ಕಾರ ಲಾಠಿ ಚಾರ್ಜ್ ನಡೆಸಿತು. ಅದೇ ಕಾಂಗ್ರೆಸ್ಸಿಗರು ಈಗ ಮಹದಾಯಿ ನೀರಿಗಾಗಿ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಇದೆಲ್ಲ ದೆಹಲಿಯ ನಕಲಿ ಗಾಂಧಿಗಳನ್ನು ಮೆಚ್ಚಿಸುವ ತಂತ್ರ “ಎಂದು ಕಿಡಿಕಾರಿದೆ.

“ಮೇಕೆದಾಟು ರೀತಿ ರಾಜ್ಯದ ಇತರ ಭಾಗಗಳಲ್ಲೂ ಪಾದಯಾತ್ರೆ ನಡೆಸುವುದಕ್ಕೆ ಕಾಂಗ್ರೆಸ್ ಚಿಂತನೆ ನಡೆಸಿದ್ದು, ಆದರೆ ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಆಯ್ದುಕೊಂಡಿರುವ ವಿಚಾರಗಳೆಲ್ಲವೂ ಅವರೇ ಸೃಷ್ಟಿಸಿದ ಸಮಸ್ಯೆಗಳಾಗಿವೆ. ತಾವೇ ಸೃಷ್ಟಿಸಿದ ಸಮಸ್ಯೆಗಳಿಗೆ ಈಗ ಹೋರಾಡುವುದು ಮೂರ್ಖತನದ ಪರಮಾವಧಿ ಅಲ್ಲದೆ ಮತ್ತೇನು” ಎಂದು ಪ್ರಶ್ನಿಸಿದ್ದಾರೆ.

“ಮಹದಾಯಿ ವಿಚಾರದಲ್ಲಿ ಗೋವಾ ಕಾಂಗ್ರೆಸ್ ಘಟಕದ ನಿಲುವಿಗೂ ಕರ್ನಾಟಕ ಕಾಂಗ್ರೆಸ್‌ ಘಟಕದ ನಿಲುವಿಗೂ ವ್ಯತ್ಯಾಸವಿದೆ. ಮಹದಾಯಿ ಹೋರಾಟವನ್ನು ಇಲ್ಲಿ ಮಾಡುವುದಕ್ಕಿಂತ ಗೋವಾದತ್ತ ಮುಖಮಾಡಿ ಪಾದ ಬೆಳೆಸಿದರೆ ಮಾತ್ರ ಯಶಸ್ವಿಯಾಗಬಹುದು. ಆದರೆ ಕಾಂಗ್ರೆಸ್ಸಿಗರಿಗೆ ಬೇಕಿರುವುದು ನೈಜ ವಿಚಾರವಲ್ಲ, ಪ್ರಚಾರ ” ಎಂದು ಟೀಕಿಸಿದೆ.

- Advertisement -

Latest News

error: Content is protected !!