Wednesday, July 15, 2026
Homeತಾಜಾ ಸುದ್ದಿಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಹಿನ್ನೆಲೆ; ವರ್ತಕರಿಗೆ ಸಹಾಯವಾಣಿ ತೆರೆದ ಬಿಜೆಪಿ

ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟೀಸ್ ಹಿನ್ನೆಲೆ; ವರ್ತಕರಿಗೆ ಸಹಾಯವಾಣಿ ತೆರೆದ ಬಿಜೆಪಿ

- Advertisement -
- Advertisement -

ಬೆಂಗಳೂರು: ಜಿಎಸ್ ಟಿ ಪಾವತಿ ವಿಚಾರವಾಗಿ ಸಣ್ಣ ವರ್ತಕರಿಗೆ ರಾಜ್ಯ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್ ನೀಡಲ್ಪಟ್ಟಿರುವ ಹಿನ್ನೆಲೆಯಲ್ಲಿ
ರಾಜ್ಯ ಬಿಜೆಪಿಯಿಂದ ವರ್ತಕರ ನೆರವಿಗೆ ಸಹಾಯವಾಣಿ ತೆರೆಯಲಾಗಿದೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ‌ನಾರಾಯಣಸ್ವಾಮಿ ಮತ್ತು ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಇಂದು ಸಹಾಯವಾಣಿಗೆ ಚಾಲನೆ ನೀಡಿದರು.

8884245123 ದೂರವಾಣಿ ಸಂಖ್ಯೆಯ ಸಹಾಯವಾಣಿ ತೆರೆಯಲಾಗಿದ್ದು, ಸೋಮವಾರದಿಂದ ಕಾರ್ಯಾರಂಭ ಮಾಡಲಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕಿರಾಣಿ ಅಂಗಡಿಗಳು, ಬೇಕರಿಗಳು, ತಳ್ಳುಗಾಡಿಗಳು ಸೇರಿದಂತೆ ವ್ಯಾಪಾರಿಗಳಿಗೆ 30-40 ಲಕ್ಷಗಳಿಗಿಂತಲೂ ಹೆಚ್ಚು ಜಿಎಸ್ ಟಿ ಪಾವತಿ ಮಾಡುವಂತೆ ವಾಣಿಜ್ಯ ತೆರಿಗೆ ಇಲಾಖೆ ನೋಟೀಸ್ ನೀಡಿದ ಕಾರಣ ವ್ಯಾಪಾರಿಗಳು ಆತಂಕಕ್ಕೀಡಾಗಿದ್ದರು‌.

- Advertisement -

Latest News

error: Content is protected !!